ಕುಂದಾಪುರ: ಕೋಟೇಶ್ವರದ ಹೋಟೇಲ್ ಗುರುಪ್ರಸಾದ್ ಬಳಿ ರಾ.ಹೆ.66ರಲ್ಲಿ ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಕುಂದಾಪುರದಿಂದ ಕೋಟೇಶ್ವರದತ್ತ ಸಾಗಲು ರಾ.ಹೆ.66ರಲ್ಲಿ ತಿರುವು ಪಡೆಯಲು ನಿಂತುಕೊಂಡಿದ್ದ ಕಾರಿಗೆ ಕುಂದಾಪುರದಿಂದ ಕೋಟೇಶ್ವರದ ಕಡೆಗೆ ಬಂದ ಇನ್ನೊಂದು ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿದ್ದಲ್ಲದೇ, ಕಾರಿನಲ್ಲಿದ್ದ ಕೋಟೇಶ್ವರ ಚಿಪ್ಪನ್ ಬೆಟ್ಟು ನಿವಾಸಿಗಳಾದ ರತನ್ರಾಜ್ ಖಾರ್ವಿ ಹಾಗೂ ಭಾಸ್ಕರ ಖಾರ್ವಿ ಗಾಯಗೊಂಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.