ಕುಂದಾಪುರ: ಚರ್ಚ್ ರಸ್ತೆಯಲ್ಲಿರುವ ಅಂಗಡಿ ಬಂದ ಸ್ಥಳೀಯ ನಿವಾಸಿ ಶರತ್ ಖಾರ್ವಿ ಅವಾಚ್ಯಶಬ್ದಗಳಿಂದ ಬೈದು ಸೋಡಾ ಹಾಗೂ ಪಾನೀಯದ ಬಾಟಲಿಯನ್ನು ನೆಲಕ್ಕೆ ಎಸೆದು ಬಳಿಕ ಹಲ್ಲೆ ನಡೆಸಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾನೆ ಎಂದು ಅಂಗಡಿ ಮಾಲಕ ಫಿಲಿಪ್ ಡಿ ಸಿಲ್ವ ಕುಂದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಾಟಲಿಯನ್ನು ನೆಲಕ್ಕೆ ಬಡಿದ ಪರಿಣಾಮ ಬಾಟಲಿಯ ಚೂರು ಸಿಡಿದು ಕೈಗೆ ಗಾಯವಾಗಿದೆ .ಸಿಗರೇಟು ಕೇಳುವ ವಿಚಾರದಲ್ಲಿ ಈ ಹಲ್ಲೆ ನಡೆದಿದೆ ಎಂದು ಫಿಲಿಫ್ ಡಿ ಸಿಲ್ವ ದೂರಿನಲ್ಲಿ ತಿಳಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.