ಕಾಡು ಕೋಣ ಸಾವು

ಹೊಸಂಗಡಿ:  ಗ್ರಾಮದ ಮಂಡಗದ್ದೆ ಬಳಿ ಸುಮಾರು 7 ವರ್ಷ ಪ್ರಾಯದ ಕಾಡು ಕೋಣವೊಂದು ಉರುಳಾಡಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಸಂಭವಿಸಿದೆ.
        ಸೋಮವಾರ ಬೆಳಗ್ಗೆ ಕಾಡು ಕೋಣವು ಇಲ್ಲಿನ ಕೃಷಿ ಭೂಮಿಗೆ ನುಗ್ಗಲು ಬರುತ್ತಿರುವಾಗ ಈ ಘಟನೆ ಸಂಭವಿಸಿದ್ದು, ತತ್‌ಕ್ಷಣ ಸ್ಥಳೀಯರು ಈ ಘಟನೆ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯವರು ಸ್ಥಳಕ್ಕಾಗಮಿಸುವಾಗ ಕಾಡು ಕೋಣ ಅರೆ ಜೀವದಿಂದ ಒದ್ದಾಡುತ್ತಿದ್ದು, ಮಧ್ಯಾಹ್ನದ ಅನಂತರ ಅದು ಮೃತಪಟ್ಟಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಮಂಗಳವಾರ ಮಧ್ಯಾಹ್ನ ಪಶು ವೈದ್ಯಾಧಿಕಾರಿಗಳು ಬಂದು ಮರಣೋತ್ತರ ಪರೀಕ್ಷೆ ನಡೆಸಿದರು.

ಗ್ಯಾಸ್‌ ಗ್ಯಾಂಗ್‌ರೀನ್‌ನಿಂದ ಸಾವು
     ಕಾಡು ಕೋಣದ ಮುಂಗಾಲಿಗೆ ಪೆಟ್ಟಾಗಿ ಒಳ ಭಾಗದಲ್ಲಿ ಕೊಳೆತು ಗ್ಯಾಸ್‌ ಗ್ಯಾಂಗ್‌ರೀನ್‌ ಎನ್ನುವ ಅಪರೂಪದ ಕಾಯಿಲೆಗೆ ತುತ್ತಾಗಿದೆ. ಅಲ್ಲದೇ ಅದು ಗ್ಯಾಸ್‌ ಗ್ಯಾಂಗ್‌ರೀನ್‌ನ ವಿಪರೀತ ನೋವಿನಿಂದ ಉರುಳಾಡಿ ಮೃತಪಟ್ಟಿದೆ ಎಂದು ಶಂಕರನಾರಾಯಣದ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ| ದಿನಕರ ಶೆಟ್ಟಿ ತಿಳಿಸಿದಾರೆ.

ದೂರಿಗೆ ಸ್ಪಂದಿಸದ ಅರಣ್ಯ ಇಲಾಖೆ
      ಈ ಪ್ರದೇಶ ಮೇಟ್‌ಲ್‌ ಗುಡ್ಡೆ ಅಭಾಯ್ನಾರಣ್ಯ ಪ್ರದೇಶಕ್ಕೆ ಹತ್ತಿರವೇ ಇದ್ದು, ಈ ಪ್ರದೇಶದಲ್ಲಿ ನೂರಾರು ಕಾಡು ಕೋಣಗಳು ಸಂಚರಿಸುತ್ತವೆ. ಇವುಗಳು ದಿನ ನಿತ್ಯ ಕೃಷಿಗೆ ದಾಳಿ ಮಾಡುತ್ತವೆ. ಇದರ ಬಗ್ಗೆ ಅರಣ್ಯ ಇಲಾಖೆಗೆ ಕೃಷಿಕರು ದೂರಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಕೃಷಿಕರು ಹೇಳಿದ್ದಾರೆ.

  ಘಟನಾ ಸ್ಥಳಕ್ಕೆ ಎಸಿಎಫ್‌ ಮಂಜುನಾಥ ಶೆಟ್ಟಿ, ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ರಮೇಶ್‌, ವನಪಾಲಕ ರವಿ ಹಾಗೂ ಅರಣ್ಯ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದರು. ಅನಂತರ ಸ್ಥಳೀಯರ ಸಹಕಾರದಿಂದ ಸುಟ್ಟು ಹೂಳಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com