ಪತ್ನಿ ಮತ್ತು ಮಗು ನಾಪತ್ತೆ: ದೂರು

ಕುಂದಾಪುರ: ಕಂದಾವರ ಗ್ರಾಮದ ಮೂಡ್ಲಕಟ್ಟೆ ಯ ಕ್ವಾಟರ್ಸ್‌ನಲ್ಲಿ ವಾಸವಾಗಿದ್ದ ತನ್ನ ಪತ್ನಿ ಹಾಗೂ ಮಗು ನಾಪತ್ತೆಯಾದ ಬಗ್ಗೆ ಪತಿ ರೌನಕ್‌ ಅಹಮ್ಮದ್‌ ಕುಂದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.
        ಮೂಡ್ಲಕಟ್ಟೆ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರೊಫೆಸರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ರೌನಕ್‌ ಅಹಮ್ಮದ್‌ ಜು. 1ರಂದು ಕೆಲಸದ ನಿಮಿತ್ತ ನಿಟ್ಟೆಗೆ ತೆರಳಿದ ಸಮಯದಲ್ಲಿ ಅವರ ಪತ್ನಿ ಶೀಭಾ ಕೌಸರ್‌ ಪುತ್ರಿ ರಫಿಯಾರೊಂದಿಗೆ ಕಾಣೆಯಾಗಿದ್ದು ಈತನಕ ಮನೆಗೂ ಬಾರದೇ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com