
ಮೊಬೈಲ್ ಅಂಗಡಿ ಗುರುಪ್ರಸಾದ್ ಎನ್ನುವರಿಗೆ ಸೇರಿದ್ದಾಗಿದ್ದು ಅಂಗಡಿಯೊಳಗಿದ್ದ ಮೊಬೈಲ್ ಅಂಗಡಿಯಲ್ಲಿದ್ದ ಲ್ಯಾಪ್ ಟಾಪ್, 2 ಕಂಪ್ಯೂಟರ್ಗಳು, ಹೊಸ ಮತ್ತು ರಿಪೇರಿಗೆ ಬಂದ ಮೊಬೆ„ಲ್ಗಳು, ಮೊಬೆ„ಲ್ ಬಿಡಿಭಾಗಗಳು ಸಟ್ಟು ಹೋಗಿದೆ.
ಅಂದಾಜು 7ರಿಂದ 8 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ. ರವಿವಾರ ಬೆಳಗ್ಗಿನ ಜಾವ 2.30ಕ್ಕೆ ಕಟ್ಟಡದ ವೆಂಟಿಲೇಟರ್ ಮೂಲಕ ಹೊಗೆಯ ವಾಸನೆ ಬರುತ್ತಿರುವುದನ್ನು ತಿಳಿದು ಎಚ್ಚರಗೊಂಡ ಹಿಂದಿನ ಮನೆಯಲ್ಲಿರುವ ಸಂಕೀರ್ಣದ ಮಾಲಕರ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿದಂತಾಗಿದೆ. ಅವರು ಕೂಡಲೇ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ಸ್ಥಳೀಯರೊಂದಿಗೆ ಕೂಡಿಕೊಂಡರು. ಒಂದು ವೇಳೆ ಬೆಂಕಿ ಪಸರಿಸಿದ್ದೇ ಆದರೆ ಪಕ್ಕದ ಟಿ.ವಿ ಸೆಂಟರ್ ಸೇರಿದಂತೆ ಹಲವು ಅಂಗಡಿಗಳಿಗೂ ಬೆಂಕಿ ಆವರಿಸುತಿತ್ತು. ತಕ್ಷಣ ಸ್ಥಳೀಯವರ ಸಹಕಾರದೊಂದಿಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.