ಕುಂದಾಪುರ: ಗುಜ್ಜಾಡಿ ಗ್ರಾಮದ ಮಂಕಿ ಮನೆ ನಿವಾಸಿ ರಾಘವ ಮೊಗವೀರ (65) ಕಾಣೆಯಾದ ಬಗ್ಗೆ ಅವರ ಪುತ್ರಿ ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
ರಾಘವ ಮೊಗವೀರ ಅವರು ಜು. 26ರಂದು ಪಡುವರಿ ಗ್ರಾಮದ ತಾರಾಪತಿಯಲ್ಲಿರುವ ತನ್ನ ತಾಯಿಯ ಮನೆಗೆ ಹೋಗಿ ಬರುತ್ತೇನೆ ಎಂದು ಹೋದವರು ಈ ತನಕ ಬಾರದೇ ಇದ್ದು, ಈ ಬಗ್ಗೆ ತಂದೆಯ ತಾಯಿ ಮನೆಗೆ ದೂರವಾಣಿ ಮೂಲಕ ವಿಚಾರಿಸಿದರೆ ಅವರು ಬೆಳಗ್ಗೆ ಬಂದವರು ಸಂಜೆ 4 ಗಂಟೆಗೆ ವಾಪಾಸು ಹೋಗಿರುತ್ತಾರೆ ಎಂದು ಹೇಳಿರುತ್ತಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ