ಅಂಗಡಿಗೆ ನುಗ್ಗಿದ ಲಾರಿ

ಕುಂದಾಪುರ: ಮರವಂತೆಯ ಅಂಗಡಿಯೊಂದಕ್ಕೆ ನುಗ್ಗಿದ ಲಾರಿ ಕಟ್ಟಡದ ಮುಂಭಾಗವನ್ನು ಕೆಡವಿಹಾಕಿದೆ. ಕೊಚ್ಚಿನ್‌ನಿಂದ ಪುಣೆಯ ಕ್ಯಾಡ್‌ಬರೀಸ್‌ ಕಂಪನಿಗೆ ಚಾಕ್ಲೆಟ್‌ ಸಾಮಗ್ರಿ ಸಾಗಿಸುತ್ತಿದ್ದ ದೊಡ್ಡ ಕಂಟೆ„ನರ್‌ ಲಾರಿ ಇಲ್ಲಿನ ಜಕ್ಕನಕಟ್ಟೆ ಎಂಬಲ್ಲಿ ಹೆದ್ದಾರಿಯ ಬಲಭಾಗಕ್ಕೆ ಚಲಿಸಿ, ಸುಮಾರು 30 ಮೀಟರ್‌ ದೂರದಲ್ಲಿರುವ ಗಣಪತಿ ಕೃಷ್ಟಪ್ಪಯ್ಯ ಶ್ಯಾನುಭಾಗ್‌ ಅವರ ದಿನಸಿ ಅಂಗಡಿಯ ಮುಂಭಾಗಕ್ಕೆ ಬಡಿದು ನಿಂತಿತು. ಅಂಗಡಿಯ ಮುಂಭಾಗದ ಗೋಡೆ, ಸಿಮೆಂಟ್‌ ಶೀಟ್‌ನ ಮಾಡು ಜಖಂಗೊಂಡಿದ್ದು, ಸುಮಾರು 75 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ.
      ಚಾಲಕ ಮತ್ತು ಕ್ಲೀನರ್‌ ಲಾರಿಯನ್ನು ಇದ್ದ ಸ್ಥಿತಿಯಲ್ಲಿ ಬಿಟ್ಟು ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಲಾರಿಯ ಮುಂಭಾಗ ಕೂಡ ಜಖಂಗೊಂಡಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com