ನಕಲಿ ಅಂಕಪಟ್ಟಿ ಪ್ರಕರಣ: ದಾಖಲಾಗದ ಎಫ್‌.ಐ.ಆರ್‌.

ಕುಂದಾಪುರ: ನಕಲಿ ಅಂಕಪಟ್ಟಿ ಪ್ರಕರಣದಲ್ಲಿ ಸಿಕ್ಕಿ ಬಿದ್ದು ನಾಲ್ಕು ದಿನಗಳೇ ಕಳೆದರೂ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೇಳೂರು ಗ್ರಾಮಕರಣಿಕ ಉಮೇಶ್‌ ವಿರುದ್ಧ ಇನ್ನೂ ಎಫ್‌ಐಆರ್‌ ದಾಖಲಿಸಲು ಇಲಾಖೆಗಳ ನಡುವೆ ಸಾಮರಸ್ಯದ ಕೊರತೆ ಉಂಟಾಗಿದೆ ಎಂದು ತಿಳಿದುಬಂದಿದೆ.
   ನಕಲಿ ಅಂಕಪಟ್ಟಿ ಸ್ವಷ್ಟಿಸಿ 2010ರಲ್ಲಿ ಉದ್ಯೋಗ ಗಳಿಸಿಕೊಂಡು ಬೇಳೂರು ಗ್ರಾಮದ ಗ್ರಾಮಕರಣಿಕ ಹುದ್ದೆಗೆ ನಿಯುಕ್ತಿಗೊಂಡಿದ್ದರೂ ಅಮಾಸೆಬೆ„ಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚೆನ್ನಗಿರಿ ತಾಲೂಕಿನ ನಿವಾಸಿ ಉಮೇಶ್‌ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಸೂಚಿಸಿ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಅವರು ಸೋಮವಾರ ಆದೇಶ ನೀಡಿದ್ದರು. ಆದರೆ ಉಮೇಶ್‌ ವಿರುದ್ಧ ಇನ್ನೂ ಎಫ್‌.ಐ.ಆರ್‌ ದಾಖಲಾಗಿಲ್ಲ.
      ಈ ಬಗ್ಗೆ ಮಂಗಳವಾರವೇ ಕುಂದಾಪುರ ವೃತ್ತ ನಿರೀಕ್ಷಕರಿಗೆ ದೂರು ನೀಡಲಾಗಿದ್ದು, ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನೂ ನೀಡುವುದಾಗಿಯೂ ತಿಳಿಸಲಾಗಿತ್ತು ಎಂದು ಕುಂದಾಪುರ ತಹಶೀಲ್ದಾರರು ಪ್ರತಿಕ್ರಿಯಿಸಿದ್ದಾರೆ.
       ಈ ಪ್ರಕರಣವನ್ನು ಅಮಾಸೆಬೆ„ಲು ಠಾಣೆಗೆ ಹಸ್ತಾಂತರಿಸಲಾಗಿದ್ದು, ಉಮೇಶ್‌ ಮೂಲತಃ ಕೋಟ ಠಾಣಾ ವ್ಯಾಪ್ತಿಯ ಬೇಳೂರು ಗ್ರಾಮಕರಣಿಕರಾಗಿರುವುದರಿಂದ ಕೋಟ ಠಾಣೆಗೆ ಗುರುವಾರ ವರ್ಗಾಯಿಸಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com