ಅಕ್ರಮ ಗೋ ಸಾಗಾಟ: ಒಬ್ಬನ ಬಂಧನ

ಕುಂದಾಪುರ: ಮೇಲ್‌ ಗಂಗೊಳ್ಳಿ ಮಸೀದಿಯ ಖಾಲಿ ಜಾಗದ ಬಳಿ ದನಗಳನ್ನು ಕಸಾಯಿಖಾನೆಗೆ ಕಳುಹಿಸುವರೇ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಕೋ ವಾಹನವನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಹಾಗೂ ಓರ್ವನನ್ನು ಬಂಧಿಸಿದ್ದಾರೆ. ಇತರ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.
        ಆರೋಪಿ ಗಂಗೊಳ್ಳಿಯ ಖಾಜಾ ಬಾವೋದ್ದಿªàನ್‌ಯನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಾದ ತಬ್ರೇಜ್‌, ಸುಹೈಲ್‌, ಸುಬಾನ್‌ ಪರಾರಿಯಾಗಿದ್ದಾರೆ.
     ವಾಹನ ಮುಳ್ಳಿಕಟ್ಟೆಯಿಂದ ಗಂಗೊಳ್ಳಿಯತ್ತ ಸಾಗುತ್ತಿದ್ದು, ವಾಹನದಲ್ಲಿ 2 ದನ ಹಾಗೂ 3 ಕರುಗಗಳನ್ನು ಸೀಟಿನ ಮಧ್ಯೆ ಕಟ್ಟಿ ಹಾಕಲಾಗಿತ್ತು.
    ಪೊಲೀಸರು ಜಾನುವಾರುಗಳು ಹಾಗೂ ಮಾರುತಿ ಇಕೋ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಗಂಗೊಳ್ಳಿ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com