ಬೈಂದೂರು: ಇಲ್ಲಿನ ಯಡ್ತರೆ ಗ್ರಾಮದ ಬೈಂದೂರು ಜಂಕ್ಷನ್ನಲ್ಲಿ ಬೈಂದೂರಿನ ಅಂದಿನ ವೃತ್ತ ನಿರೀಕ್ಷಕ ಬಷೀರ್ ಅಹಮ್ಮದ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಮವಸ್ತ್ರವನ್ನು ಜಗ್ಗಿ, ಕೊಲೆ ಬೆದರಿಕೆ ಹಾಕಿದ ನಾಲ್ವರು ಆರೋಪಿಗಳು ದೋಷಮುಕ್ತರಾಗಿದ್ದಾರೆ.
ಸ್ಥಳೀಯ ಪತ್ರಿಕೆಯ ಪತ್ರಕರ್ತರಾದ ಅಂದೂಕ್, ಅಬ್ದುಲ್ ಮಜೀದ್, ಉದ್ಯಮಿಗಳಾದ ಬಿ.ಎಂ.ಫಾರೂಕ್ ಹಾಗೂ ಮೊಹಮ್ಮದ್ ಸುಲ್ತಾನ್ ದೋಷಮುಕ್ತರಾದವರು. ವೃತ್ತ ನಿರೀಕ್ಷಕ ಬಶೀರ್ ಅಹಮ್ಮದ್ 2008 ಎಂದು ಫೆಬ್ರವರಿ 14ರಂದು ಸಂಜೆ ವಾಹನ ತಪಾಸಣೆ ಮಾಡುತ್ತಿದ್ದಾಗ ಬೊಲೆರೋ ವಾಹನದಲ್ಲಿ ಬಂದ ಆರೋಪಿಗಳು ಅಪರಾಧ ಮಾಡಿದ್ದರು ಎನ್ನಲಾಗಿತ್ತು. ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಬೈಂದೂರಿನ ಅಂದಿನ ಎಸ್.ಐ. ಚೆಲುವರಾಜು ಮಾಡಿದ್ದರೆ, ಕುಂದಾಪುರದ ವೃತ್ತ ನಿರೀಕ್ಷಕ ವಾಲೈಂಟೀನ್ ಡಿ ಸೋಜಾ ಚಾರ್ಜ್ಶೀಟ್ನ್ನು ಸಲ್ಲಿಸಿದ್ದರು.
ಪ್ರಕರಣವನ್ನು ವಿಚಾರಣೆ ನಡೆಸಿದ ಕುಂದಾಪುರದ ಹೆಚ್ಚುವರಿ ನ್ಯಾಯಾಧೀಶೆ ಶುಭಾ ಅವರು ಆರೋಪಿಗಳ ವಿರುದ್ಧ ಮಾಡಲಾದ ಆರೋಪಣೆ ಸಾಬೀತಾಗದ ಕಾರಣ ಅವರನ್ನು ದೋಷಮುಕ್ತಗೊಳಿಸಿದ್ದಾರೆ. ಆರೋಪಿಗಳ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.