ನಿರ್ಮಾಣ ಹಂತದ ಮನೆ ಧ್ವಂಸ

ಬೈಂದೂರು: ಬೈಂದೂರಿನ ಯಡ್ತರೆ ಗ್ರಾಮದ ನಾಕಟ್ಟೆ ಬಳಿಯ ತಮ್ಮ ಸ್ವಂತ ಸ್ಥಳದಲ್ಲಿ ಹೊಸದಾಗಿ ಕಟ್ಟಿಸುತ್ತಿರುವ ಮನೆಯನ್ನು ದುಷ್ಕರ್ಮಿಗಳು ರಾತ್ರೋ ರಾತ್ರಿ ಧ್ವಂಸ ಮಾಡಿದ್ದಾರೆ. ಮತ್ತು ಈ ಕೃತ್ಯಕ್ಕೆ ಸ್ಫೋಟಕ ಬಳಸಿದ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ಮೊಹಮ್ಮದ್‌ ಸುಲ್ತಾನ್‌ ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
     ಮನೆಯ ಕಾಮಗಾರಿ ಪೂರ್ಣ ಹಂತಕ್ಕೆ ಬರುತ್ತಿದ್ದು ಆರೋಪಿಗಳು ಮನೆಯ ಒಂದು ಭಾಗವನ್ನು ಸಂಪೂರ್ಣ ಧ್ವಂಸ ಮಾಡಿದ್ದು ಸುಮಾರು 10ರಿಂದ 12 ಲಕ್ಷ ರೂ. ನಷ್ಠ ಅಂದಾಜಿಸಲಾಗಿದೆ ಹಾಗೂ ವ್ಯಕ್ತಿಗಳಾದ ಸಮ್‌ಕುದ್ರು ಮುಕ್ತಿಯಾರ್‌, ಫಯಾಜ್‌ ಆಲಿ, ಮಾವಡ ಹಸನ್‌ ಹಾಗೂ ಮತ್ತಿರರು ಸೇರಿ ಈ ಕೃತ್ಯ ಎಸಗಿರಬಹುದು ಎನ್ನುವ ಅನುಮಾನವಿರುತ್ತದೆ ಎಂದು ಮೊಹಮ್ಮದ್‌ ಸುಲ್ತಾನ್‌ ದೂರಿನಲ್ಲಿ ತಿಳಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಪೂರ್ವ ಯೋಜಿತ ಕೃತ್ಯ:
     ದ.ಕ., ಉಡುಪಿ ಜಿಲ್ಲೆಯಲ್ಲಿಯೇ ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿದ್ದು ಪೊಲೀಸ್‌ ಅಧಿಕಾರಿಗಳು ಆರೋಪಿಗಳನ್ನು ತಕ್ಷಣ ಬಂಧಿಸದೇ ಅವರ ರಕ್ಷಣೆಗೆ ನಿಂತಿರುವುದು ಕಂಡು ಬಂದಿದೆ. ಅಲ್ಲದೇ ಈ ಪ್ರಕರಣ ದ್ವೇಷ ದಿಂದ ನಡೆದಿದ್ದು ಇದೊಂದು ಪೂರ್ವಯೋಜಿತ ಕೃತ್ಯ ಎಂದು ಪತ್ರಕರ್ತ ಅಂದುಕಾ ಎಸ್‌. ಹೇಳಿದ್ದಾರೆ.
       ಅವರು ಕುಂದಾಪುರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತನ್ನ ಮಾವನಿಗೆ ಆದ ಅನ್ಯಾಯದ ವಿಚಾರವಾಗಿ ಮಾತನಾಡುತ್ತಾ, ಘಟನೆಯ ಸ್ಥಳಕ್ಕೆ ಯಾವುದೇ ಹಿರಿಯ ಅಧಿಕಾರಿಗಳು ಭೇಟಿ ನೀಡಿಲ್ಲ. ಅಲ್ಲದೇ ಕುಟುಂಬಕ್ಕೆ ಶಂಕಿತ ಆರೋಪಿಗಳಿಂದ ಜೀವ ಭಯವಿದ್ದು ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಸರಕಾರವನ್ನು ವಿನಂತಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ದೂರುದಾರ ಮಹಮ್ಮದ್‌ ಸುಲ್ತಾನ್‌, ಉಮ್ಮರ್‌ ಫಾರೂಕ್‌ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com