ಬೈಂದೂರಿನಲ್ಲಿ ಟೆಂಪೊ ಪಲ್ಟಿ ವಿದ್ಯಾರ್ಥಿ ಸಾವು

ಬೈಂದೂರು: ರಸ್ತೆ ಹೊಂಡ ತಪ್ಪಿಸುವ ಧಾವಂತದಲ್ಲಿ ನಿಯಂತ್ರಣ ತಪ್ಪಿ ಟೆಂಪೊ ಪಲ್ಟಿಯಾಗಿ ಓರ್ವ ಬಾಲಕ ಸಾವನ್ನಪ್ಪಿದ ಘಟನೆ ಬೈಂದೂರು ಸಮೀಪದ ಸೆಳ್ಳಾಕುಳ್ಳಿ ಕ್ರಾಸ್‌ ಬಳಿ ನಡೆದಿದೆ. ಬೈಂದೂರಿನಿಂದ ಕುಮಟಾ ಕಡೆ ಸಾಗುತ್ತಿದ್ದ ಸಿಟಿ ರೈಡ್‌ ಟೆಂಪೊಗೆ ಲಾರಿ ಎದುರುಗಡೆ ಬಂದ ಪರಿಣಾಮ ನಿಯಂತ್ರಣ ತಪ್ಪಿತು.ಇದರಿಂದ ಟೆಂಪೊ ಕಮರಿಗೆ ಉರುಳಿ ಚೇತನ(12) ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾನೆ. ಈತ ಅಂಕೋಲ ತಾಲೂಕಿನ ಹಿಲ್ಲೂರು ಪ್ರಾಥಮಿಕ ಶಾಲೆಯ ಆರನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಟೆಂಪೊದಲ್ಲಿದ್ದವರು ಕುಮಟಾ ತಾಲೂಕಿನ ಬಾಡಾದವರಾಗಿದ್ದು ಗುರುವಾರ ಸಂಜೆ ಸಿಗಂದೂರು ದೇವಸ್ಥಾನದಲ್ಲಿ ಉಳಿದು ಶುಕ್ರವಾರ ಮುಂಜಾನೆ ಪೂಜೆ ಸಲ್ಲಿಸಿ ಕೊಲ್ಲೂರು ಮಾರ್ಗದ ಮೂಲಕ ಊರಿಗೆ ತೆರಳುತ್ತಿದ್ದರು. ಅಪಘಾತದಲ್ಲಿ ಟೆಂಪೊ ಸಂಪೂರ್ಣ ನುಜ್ಜು ನುಜ್ಜಾಗಿದೆ. ಉಲ್ಲಾಸ್‌(25), ಬಂಗಾರ(45), ಕಿಶೋರ(50), ರಂಜಿ(9) ಸೇರಿದಂತೆ ಆರು ಜನ ಗಂಭೀರ ಗಾಯಗೊಂಡಿದ್ದಾರೆ.ಇವರನ್ನ ಕುಂದಾಪುರ ಹಾಗೂ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ಹೊಂಡಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com