ವ್ಯಕ್ತಿ ನಾಪತ್ತೆ - ದೂರು ದಾಖಲು

ಕುಂದಾಪುರ: ಬೆಂಗಳೂರಿನ ಬನಶಂಕರಿ ಹೊಸ್ಕೆರೆ ಹಳ್ಳಿಯ ನಿವಾಸಿ ಶ್ಯಾಮ ಪ್ರಸಾದ್‌(30) ಅವರು ನಾಪತ್ತೆಯಾದ ಬಗ್ಗೆ ಅವರ ಭಾವ ಕೇಶವಮೂರ್ತಿ ಅವರು ಗಂಗೊಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.
      ಶ್ಯಾಮಪ್ರಸಾದ್‌ ಅವರು ಜೂ.13ರಂದು ಕೆಲಸ ಇರುವುದರಿಂದ ಎರಡು ದಿನ ಬಿಟ್ಟು ಬರುವುದಾಗಿ ತನ್ನ ಪತ್ನಿಯ ಬಳಿ ಹೇಳಿ ಹೋದವರು ಈ ತನಕ ನಾಪತ್ತೆಯಾಗಿದ್ದಾರೆ. ಮೂರು ದಿನಗಳ ನಂತರ ಮೊಬೈಲ್‌ಗೆ ಪತ್ನಿ ಹಾಗೂ ಮನೆಯವರು ಪೋನಾಯಿಸಿದರೂ ಸ್ವಿಚ್‌ ಆಫ್‌ ಬಂದಿರುತ್ತದೆ. ಈ ಸಮಯದಲ್ಲಿ ಜೂ.15ರಂದು ತ್ರಾಸಿ ಮರವಂತೆ ಬೀಚ್‌ ಬಳಿ ಶ್ಯಾಮಪ್ರಸಾದ್‌ ಅವರ ಕಾರು ಕಂಡುಬಂದಿದ್ದು ಗಂಗೊಳ್ಳಿ ಎಸ್‌.ಐ. ಕಾರಿನಲ್ಲಿ ಸಿಕ್ಕ ಮೊಬೈಲ್‌ ನಂಬ್ರವನ್ನು ಅನುಸರಿಸಿ ಸಂಬಂಧಪಟ್ಟವರಿಗೆ ಮಾಹಿತಿಯನ್ನು ನೀಡಿರುತ್ತಾರೆ. ಬೆಂಗಳೂರಿನಿಂದ ಬಂದ ಸಂಬಂಧಿಕರು ಪರಿಶೀಲಿಸಿದಾಗ ಕಾಣೆಯಾದ ಬಗ್ಗೆ ದೂರು ನೀಡಿರುತ್ತಾರೆ.
     ಶ್ಯಾಮಪ್ರಸಾದ್‌ ಅವರು ಬೆಂಗಳೂರು ಬನಶಂಕರಿ ಗಿರಿನಗರದ ಹೊಸ್ಕರೆಹಳ್ಳಿಯಲ್ಲಿ ಪತ್ನಿಯೊಮದಿಗೆ ವಾಸವಾಗಿದ್ದು, ಕಾರಿನ ಗ್ಯಾಸ್‌ ಕಿಟ್‌ ಅಳವಡಿಸುವ ಹಾಗೂ ಸಕಲೇಶಪುರದಲ್ಲಿ ಜಲ್ಲಿ ಕ್ರಷರ್‌ ವ್ಯವಹಾರದ ಪಾಲುದಾರಾಗಿರುತ್ತಾರೆ.
       ಅವರು ಬೆಂಗಳೂರಿನಿಂದ ಬಂದು ಸಮುದ್ರದಲ್ಲಿ ಸ್ನಾನ ಮಾಡಲು ಅಥವಾ ಬೇರೆ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾರೆ ಎಂದು ಭಾವ ಕೇಶವಮೂರ್ತಿ ದೂರು ನೀಡಿರುತ್ತಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com