ಅಸ್ಪೃಶ್ಯತೆ ಆಚರಣೆ ವಿರುದ್ಧ ದೂರು

ಗಂಗೊಳ್ಳಿ: ದೇಶದ್ಯಾಂತ ಅಸ್ಪೃಶ್ಯತೆ ನಿಷೇಧವಿದ್ದರೂ, ಉಡುಪಿಯಲ್ಲಿ ಈ ಅಮಾನವೀಯ ಆಚರಣೆಯ ವಿರುದ್ಧ ದೂರೊಂದು ದಾಖಲಾಗಿದೆ. ಇಲ್ಲಿನ ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಸಾಕಮ್ಮ ಎಂಬವರ ಮದುವೆ ವೇಳೆ ಪುರೋಹಿತರು, ಇತರರು ಅಸ್ಪೃಶ್ಯತೆ ಆಚರಿಸಿದ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಕೇಸಾಗಿದೆ.
ಘಟನೆ ವಿವರ: ಸಾಕಮ್ಮ ಅವರ ವಿವಾಹಕ್ಕೆ ನೆರೆಯ ತ್ರಾಸಿ ಗ್ರಾಪಂ ವ್ಯಾಪ್ತಿಯ ಅಣ್ಣಪ್ಪಯ್ಯ ಸಭಾ ಭವನವನ್ನು ಕಾಯ್ದಿರಿಸಲಾಗಿತ್ತು. ಸಭಾಭವನದ ಮಾಲೀಕರಿಗೆ 42,000 ಮುಂಗಡವನ್ನೂ ನೀಡಲಾಗಿತ್ತು. ಬುಧವಾರ ಸಭಾಭವನಕ್ಕೆ ಬಂದಿದ್ದರು. ಈ ವೇಳೆ ಅವರು ಕೊರಗ ಜಾತಿಯ ಸಂಪ್ರದಾಯದಂತೆ ಮದುವೆಗೆ ವಾದ್ಯದ ಬದಲು ಡೋಲು, ಚಂಡೆ ಬಾರಿಸಿದರು. ಇದನ್ನು ಗಮನಿಸಿದ ಪುರೋಹಿತರು, ಸಭಾಭವನದ ಸ್ವಚ್ಛತೆಯ ಮಹಿಳೆಯರು, 'ಇದು ಕೊರಗರ ಮದುವೆ. ಈ ಮದುವೆಯ ಕಾರ್ಯ ನಾವು ಮಾಡುವುದಿಲ್ಲ, ಅವರು ಉಂಡ ಬಾಳೆಲೆಯನ್ನು ನಾವು ತೆಗೆಯುದಿಲ್ಲ' ಎಂದು ಗಣ್ಯರ ಎದುರಿನಲ್ಲಿ ಜಾತಿ ನಿಂದನೆ ಮಾಡಿದರು. ಬಳಿಕ, ಮದುವೆ ಮಾಡಿಸದೆ ಸಭಾಭವನದಿಂದ ಹೊರಟು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com