ಕುಂದಾಪುರ : ಬಸ್ರುರು ಮೂರು ಕೈ ಬಳಿ ಕಾರೊಂದು ರಿಕ್ಷಾ ಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಸೇರಿದಂತೆ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ಸಂಜೆ ಸಂಭವಿಸಿದೆ.
ಕೋಟೇಶ್ವರದತ್ತ ಸಾಗುತ್ತಿದ್ದ ಕಾರು ಟಿ.ಟಿ.ರಸ್ತೆಯಿಂದ ಕುಂದಾಪುರದತ್ತ ಸಾಗುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಜಯಂತ (38) ಸೇರಿದಂತೆ ರಿಕ್ಷಾದಲ್ಲಿದ್ದ ಟಿ.ಟಿ.ರಸ್ತೆಯ ನಿವಾಸಿಗಳಾದ ಶಾರದಾ (57), ಕಾವ್ಯ(26),ಬಾಲಕಿ ದೀಕ್ಷಿಕಾ (ಒಂದೂವರೆ ವರ್ಷ) ಗಂಭೀರವಾಗಿ ಗಾಯಗೊಂಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.