ಕುಂದಾಪುರ: ಬಳ್ಕೂರು ಗ್ರಾಮದ ನಿವಾಸಿ ಮುಕ್ತಾ ಅವರು ಸೋಮವಾರ ರಾತ್ರಿ ಮನೆಯ ಬಳಿಯಲ್ಲಿರುವ ಕರಕ್ಕಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಕೆಲವು ಸಮಯದಿಂದ ಗರ್ಭಕೋಶದ ಕ್ಯಾನ್ಸ್ರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಈ ಬಗ್ಗೆ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದ ಹಿನೆ°ಲೆಯಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪುತ್ರ ದೂರು ನೀಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.