ಪತಿಯ ಸಾವಿನಿಂದ ನೊಂದು ಪತ್ನಿ ಆತ್ಮಹತ್ಯೆ

ಕುಂದಾಪುರ: ಪತಿಯ ಸಾವಿನ ದುಃಖವನ್ನು ತಡೆಯಲಾರದೇ ಮಾನಸಿಕವಾಗಿ ನೊಂದ ಪತ್ನಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದರ ಮೂಲಕ ಪತಿಯ ಸಾವಿನಲ್ಲಿ ಒಂದಾದ ಘಟನೆ ಕಾವ್ರಾಡಿ ಗ್ರಾಮದ ನೆಲ್ಲಿಕಟ್ಟೆ ಕರಣಿಕರಬೆಟ್ಟು ನಲ್ಲಿ ನಡೆದಿದೆ.
     ಕರಣಿಕರಬೆಟ್ಟು ನಿವಾಸಿ ನಾಗಪ್ಪಯ್ಯ ಕರಣಿಕ (93) ಶನಿವಾರ ರಾತ್ರಿ ಅನಾರೋಗ್ಯದಿಂದ ತೀರಿಕೊಂಡಿದ್ದು , ಅವರ ಆರೈಕೆಯಲ್ಲಿದ್ದ ಅವರ ಪತ್ನಿ ಸಾವಿತ್ರಿದೇವಿ (67) ಅವರು ಪತಿಯ ಸಾವಿನ ದುಃಖದಿಂದ ಮಾನಸಿಕವಾಗಿ ನೊಂದು ರವಿವಾರ ಬೆಳಗ್ಗೆ ಮನೆಯ ಪೂರ್ವಬದಿಯಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಪುತ್ರ ಕುಂದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com