ಕುಂದಾಪುರ: ಸಿದ್ದಾಪುರ ಮಾರುಕಟ್ಟೆ ಹತ್ತಿರ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಸಿದ್ದಾಪುರ ಜಂಬೂರು ನಿವಾಸಿ ಮಹೇಶ್ ನಾಯ್ಕನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಬಳಿಯಿಂದ ನಗದು ಹಾಗೂ ಜುಗಾರಿಗೆ ಬಳಸಿದ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.