ಹುಟ್ಟೂರಿನಲ್ಲಿ ಆರ್‌.ಎಸ್‌.ಎಸ್‌. ನ ಪ್ರಚಾರಕ ಗಣೇಶ ಕಾಮತ್‌ ಅಂತ್ಯಕ್ರಿಯೆ

ಕುಂದಾಪುರ: ಸಿಂಧನೂರು ಸಮೀಪ ಕಾರು ಅಪಘಾತದಲ್ಲಿ ಮೃತಪಟ್ಟಿದ್ದ ಬಳ್ಳಾರಿ ವಿಭಾಗದ ಪ್ರಚಾರಕ ಗಣೇಶ್‌ ಕಾಮತ್‌ (42) ಅವರ ಮೃತ ದೇಹ ಗುರುವಾ ಅವರ ಹುಟ್ಟೂರು ಕುಂದಾಪುರದ ಹಂಗಳೂರಿಗೆ ತರಲಾಯಿತು.
      ಕಳೆದ ಒಂದೂವರೆ ವರ್ಷಗಳಿಂದ ಪ್ರಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಸಿಂಧನೂರಿನಲ್ಲಿ ಆಯೋಜಿಸಲಾಗಿದ್ದ ಬೈಠಕ್‌ ಮುಗಿಸಿ ರಾಯಚೂರಿಗೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಮೃತದೇಹವನ್ನು ಕುಂದಾಪುರಕ್ಕೆ ತರಲಾಗಿ, ಕೋಟೇಶ್ವರ‌ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರೀಯೆಯನ್ನು ನೆರವೇರಿಸಲಾಯಿತು.
        ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಚಾರಕರಾಗಿದ್ದ ಗಣೇಶ ಕಾಮತ್‌ ಪಾರ್ಥಿàವ ಶರೀರ ಹುಟ್ಟೂರಿಗೆ ಬರುತ್ತಿದ್ದಂತೆಯೇ ಸಂಘಪರಿವಾರದ ಹಲವರು ಮೃತರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
         ಅಖೀಲ ಭಾರತ ಸಹವ್ಯವಸ್ಥಾ ಪ್ರಮುಖ್‌ ಮಂಗೇಶ್‌ ಬೇಂಡೆ, ಕ್ಷೇತ್ರೀಯ ಪ್ರಚಾರಕ್‌ ಪ್ರಮುಖ್‌ ದಾ.ಮಾ. ರವೀಂದ್ರ, ವಿಶ್ವ ಹಿಂದೂಪರಿಷತ್‌ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್‌ ಜಿ., ಕರ್ನಾಟಕ ಉತ್ತರ ಕರ್ನಾಟಕ ಪ್ರಾಂತ ಪ್ರಚಾರಕ್‌ ಶಂಕರ್‌ ಆನಂದ್‌, ಕುಟುಂಬ ಪ್ರಬೋಧನಾ ಅಖೀಲ ಭಾರತ ಸಂಯೋಜಕ ಕಜಂಪಾಡಿ ಸುಬ್ರಮಣ್ಯ ಭಟ್‌,ಅಖೀಲ ಭಾರತೀಯ ಕುಟುಂಬ ಪ್ರಭೋಧನಾ ಸಹ ಸಂಯೋಜಕ ಸೂ. ರಾಮಣ್ಣ, ಕರ್ನಾಟಕ ದಕ್ಷಿಣ ಸಹ ಪ್ರಾಂತ ಪ್ರಚಾರಕ್‌ ಸುಧೀರ್‌, ಉತ್ತರ ಕರ್ನಾಟಕ ಪ್ರಾಂತದ ಪ್ರಾಂತ ಕಾರ್ಯವಾಹ ಅರವಿಂದ್‌ ದೇಶಪಾಂಡೆ, ಉಡುಪಿ ಜಿಲ್ಲಾ ಸಂಘಚಾಲಕರು ಶಂಭು ಶೆಟ್ಟಿ,ಉಡುಪಿ ಜಿಲ್ಲಾ ವಿಶ್ವ ಹಿಂದು ಪರಿಷತ್‌ ಅಧ್ಯಕ್ಷ ಸುಪ್ರಸಾದ್‌ ಶೆಟ್ಟಿ, ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ರಮಣ್ಯ ಹೊಳ್ಳ ಕುಂದಾಪುರ, ಕುಂದಾಪುರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಕಾವೇರಿ, ಕುಂದಾಪುರ ಮಾಜಿ ಪುರಸಭಾಧ್ಯಕ್ಷ ಮೋಹನ್‌ ದಾಸ್‌ ಶೆಣೆ„, ಕುಂದಾಪುರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಂಕರ ಅಂಕದಕಟ್ಟೆ, ಬಿಜೆಪಿ ಕ್ಷೇತ್ರಾಧ್ಯಕ್ಷ ಕಿಶೋರ್‌ ಕುಮಾರ್‌ ಸ್ಥಳೀಯರಾದ ನಿರಂಜನ ಕಾಮತ್‌, ಶಂಕರ್‌ ಕಾಮತ್‌, ಶ್ರೀಧರ್‌ ಕಾಮತ್‌ ಮೊದಲಾದವರು ಹಾಜರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com