ಸ್ಫೂರ್ತಿಧಾಮದಿಂದ ವ್ಯಕ್ತಿ ನಾಪತ್ತೆ

ಕುಂದಾಪುರ: ಸುಮಾರು ನಾಲ್ಕು ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿ ಕುಂದಾಪುರ ಪರಿಸರದಲ್ಲಿ ಅಲೆಯುತ್ತಿದ್ದ ಸುಮಾರು 36 ವರ್ಷ ಪ್ರಾಯದ ವಾದಿರಾಜ ಹೆಬ್ಬಾರ್ ಎಂಬವರನ್ನು ಕೋಟೇಶ್ವರ ಸ್ಫೂರ್ತಿ ಧಾಮಕ್ಕೆ ದಾಖಲಿಸಲಾಗಿದೆ. ಇತ್ತೀಚಿಗೆ ಇಲ್ಲಿನ ಕೋಣಿ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ನಾಗರಾಜ ಆಚಾರ್ಯ, ನಾಗರಾಜ, ಕೃಷ್ಣ ಮುಂತಾದವರು ಈ ಕಾರ್ಯ ಮಾಡಿದ್ದು,  ಎರಡು ದಿನದ ಹಿಂದೆ ವಾದಿರಾಜ ಹೆಬ್ಬಾರ್ ಸ್ಪೂರ್ತಿಧಾಮದಿಂದ ನಾಪತ್ತೆಯಾಗಿದ್ದಾರೆ. ಇವರನ್ನು ಯಾರಾದರು ಗುರುತಿಸಿದವರು ಸ್ಫೂರ್ತಿಧಾಮಕ್ಕೆ ಅಥವಾ ಮೊಬೈಲ್ ಸಂಖ್ಯೆ 9448984119, ಸ್ಥಿರ ದೂರವಾಣಿ ಸಂಖ್ಯೆ -0820 2001754ನ್ನು ಸಂಪರ್ಕಿಸಬೇಕೆಂದು ಸ್ಫೂರ್ತಿಧಾಮದ ಮುಖ್ಯ ಕಾರ್ಯನಿರ್ವಾಹಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com