ಹಾಲಾಡಿ: ಗ್ರಾಮದ ಕಕ್ಕುಂಜೆ ಕ್ರಾಸ್ ಬಳಿ ಲಿಂಟಲ್ ಕುಸಿದು ಆರ್ಡಿ ಗಂಟುಬೀಳು ನಿವಾಸಿ ಹರೀಶ್(24) ಮೃತಪಟ್ಟಿದ್ದಾರೆ.
ಹರೀಶ್ ಅವರು ಕಂಪೌಂಡ್ ಗೊಡೆಯ ಕೆಲಸವನ್ನು ಮುಗಿಸಿ ಪಕ್ಕದ ಮನೆಯ ಲಿಂಟಲ್ ಮೇಲೆ ಕಾಲು ಇಟ್ಟಾಗ ಅದು ಕುಸಿದು ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತುರ್ತು ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯೆದಲ್ಲಿ ಮೃತಪಟ್ಟಿದ್ದಾರೆ. ಮೃತರು ಅವಿವಾಹಿತರಾಗಿದ್ದು ತಾಯಿ ಹಾಗೂ ಹಿರಿಯ ಸಹೋದರನನ್ನು ಅಗಲಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.