ಮಾರಸ್ವಾಮಿ ವರಾಹ ದೇವಸ್ಥಾನದಲ್ಲಿ ಕಳವು

ಮರವಂತೆ: ಇಲ್ಲಿನ ಮಾರಸ್ವಾಮಿಯಲ್ಲಿರುವ ವರಾಹ ದೇವಸ್ಥಾನಕ್ಕೆ ರವಿವಾರ ರಾತ್ರಿ ಕಳ್ಳರು ಹೊಕ್ಕು ಗರ್ಭಗುಡಿಯ ಬಾಗಿಲುಗಳಿಗೆ ಅಳವಡಿಸಿದ್ದ ಬೆಳ್ಳಿಯ ತಗಡನ್ನು ಕಿತ್ತು ಒಯ್ದಿದ್ದಾರೆ.

      
 ದೇವಾಲಯದ ಪೂರ್ವದಿಕ್ಕಿನ ಬಾಗಿಲನ್ನು ಒಡೆದು ಒಳಹೊಕ್ಕ ಕಳ್ಳರು ತೀರ್ಥಮಂಟಪದ ದಕ್ಷಿಣ ದಿಕ್ಕಿನ ಪ್ರವೇಶ ದ್ವಾರವನ್ನು ಬಲಪ್ರಯೋಗಿಸಿ ತೆರೆದು ಅಲ್ಲಿ ಮೂರು ಗರ್ಭಗುಡಿಗಳ ಬಾಗಿಲಿಗೆ ಅಳವಡಿಸಿದ್ದ ತಗಡನ್ನು ಕಿತ್ತು ತೆಗೆದಿದ್ದಾರೆ.

        ಕಳವು ಮಾಡಿದ ಬೆಳ್ಳಿಯ ತೂಕ ಸುಮಾರು 7 ಕೆ.ಜಿ. ಎಂದು ಅಂದಾಜಿಸಲಾಗಿದ್ದು ಸುಮಾರು 2 ಲಕ್ಷ ರೂ. ಮೌಲ್ಯ ಇದೆ ಎಂದು ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಮಚಂದ್ರ ಹೆಬ್ಟಾರ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸೇವಾ ಕೌಂಟರ್‌ನಲ್ಲಿದ್ದ 5 ಸಾವಿರ ರೂ.ನಗದನ್ನು ಕೊಂಡೊಯ್ದಿದ್ದಾರೆ.

     
 ಸ್ಥಳಕ್ಕೆ ಕುಂದಾಪುರ ಡಿವೈಎಸ್‌ಪಿ ಯಶೋದಾ ವಂಟಗೋಡಿ , ವೃತ್ತ ನಿರೀಕ್ಷಕ ಮಂಜುನಾಥ ಕವರಿ, ಗಂಗೊಳ್ಳಿ ಠಾಣಾಧಿಕಾರಿ ಸಂಪತ್‌ಕುಮಾರ್‌ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಬಂದ ಬಂದ ಶ್ವಾನ ದೇವಾಲಯದ ಹತ್ತಿರದ ಹಿತ್ತಿಲಿನ ವರೆಗೆಷ್ಟೆ ಹೋಯಿತು. ಬೆರಳಚ್ಚು ತಜ್ಞರು ಬೆರಳಚ್ಚುಗಳನ್ನು ಸಂಗ್ರಹಿಸಿರುವರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com