ಕುಂದಾಪುರ: ಶಾಲೆಯ ಬಳಿ ಬಿಡುತ್ತೇನೆ ಎಂದು ಹೇಳಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ಅಲ್ಲಿ ಬಿಡದೇ ಭಟ್ಕಳಕ್ಕೆ ಕರೆದುಕೊಂಡು ಹೋಗಿ ಜೀವ ಬೆದರಿಕೆ ಹಾಕಿ ಅಪಹರಣ ಮಾಡಲು ಯತ್ನಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ಗಂಗೊಳ್ಳಿಯ ಬಂದರು ರಸ್ತೆಯ ನಿವಾಸಿ ಸಂಧ್ಯಾ ಗಂಗೊಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ವೆಂಕಟರಮಣ ದೇವಸ್ಥಾನದ ಬಳಿ ನಡೆದುಕೊಂಡು ಹೋಗುತ್ತಿರುವಾಗ ತಾಯಿಯ ಪರಿಚಯ ಹೇಳಿ ಶಾಲೆಯ ಬಳಿ ಬಿಡುವೆನೆಂದು ಕಾರಿನಲ್ಲಿ ಕುಳ್ಳಿರಿಸಿಕೊಂಡು ಅಲ್ಲಿ ಬಿಡದೇ ಪೆಟ್ರೋಲ್ ಬಂಕ್ಗೆ ತೆರಳಿ ಅಲ್ಲಿಂದ ಭಟ್ಕಳಕ್ಕೆ ಕರೆದುಕೊಂಡು ಹೋಗಿರುತ್ತಾನೆ. ನಂತರ ಅಲ್ಲಿ ಕಾರು ಲಾಕ್ ಮಾಡಿ ಆತ ಇಳಿದು ಹೋದಾಗ ತಾನು ಕಾರಿನ ಗ್ಲಾಸ್ ಒಡೆದು ಹೊರಗೆ ಬಂದಿರುವುದಾಗಿ ಆಕೆ ದೂರಿನಲ್ಲಿ ತಿಳಿಸಲಾಗಿರುತ್ತದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.