ಕೊಲೆಯಾಗಿ ಪತ್ತೆಯಾದ ನಾಪತ್ತೆಯಾಗಿದ್ದ ಮಹಿಳೆ

ಬೈಂದೂರು: ಬೈಂದೂರು ಪೊಲೀಸರ ಮಹತ್ತರ ಕಾರ್ಯಾಚರಣೆಯಲ್ಲಿ ನಾಪತ್ತೆಯಾದ ಯುವತಿ ಕೊಲೆಯಾಗಿ ಪತ್ತೆಯಾಗಿದ್ದು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಘಟನೆ ವಿವರ: ಗೋಳಿಹೊಳೆ ಗ್ರಾಮದ ಮೃತೇರಿ ಗುಡ್ಡೆಮನೆ ಹಾವಳಿ ಪೂಜಾರಿಯವರ ಮಗಳು ಪ್ರೇಮ ಯಾನೆ ತುಂಗ(32) ಎಪ್ರಿಲ್‌ 4 ರಂದು ಕಾಣೆಯಾಗಿದ್ದಳು.ಈ ಬಗ್ಗೆ ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಘಟನೆ ನಡೆದು ಒಂದೂವರೆ ತಿಂಗಳು ಕಳೆದರು ಪತ್ತೆಯಾಗದ ಹಿನ್ನೆಲೆಯಲ್ಲಿ ಆರಕ್ಷಕ ಇಲಾಖೆ ವಿಶೇಷವಾಗಿ ತನಿಖೆ ಮುಂದಾಗಿತ್ತು.ಹೀಗಾಗಿ ಆನಂದನನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದಾಗ ನಾಪತ್ತೆಯಾದ ಪ್ರೇಮಾಳನ್ನು ಕೊಲೆ ಮಾಡಿ ಜಡ್ಕಲ್‌ ಸಮೀಪದ ದಟ್ಟಾರಣ್ಯದಲ್ಲಿ ಹೂಳಲಾಗಿದೆ ಎಂದು ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.
       ನಾಪತ್ತೆಯಾದ ದಿನ ಪ್ರೇಮಾ ಮನೆಯಲ್ಲಿ ಆನಂದ ಎಂಬುವವರ ಮನೆಗೆ ಹೋಗಿ ಬರುವುದಾಗಿ ತಿಳಿಸಿದ್ದರು. ಈ ಸಂಬಂಧ ಆನಂದನನ್ನು ಠಾಣೆಗೆ ಕರೆತರುವಾಗ ಪೊಲೀಸರಿಂದ ತಪ್ಪಿಸಿಕೊಂಡಿದ್ದಾನೆ. ಹೀಗಾಗಿ ಪ್ರಕರಣ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಪ್ರೇಮಾ ಹದಿನೈದು ವರ್ಷಗಳ ಹಿಂದೆ ವಿವಾಹವಾಗಿದ್ದು ಎರಡು ಮಕ್ಕಳನ್ನು ಹೊಂದಿದ್ದಾಳೆ. ಆಶಾ ಕಾರ್ಯಕರ್ತೆ ಮತ್ತು ಇನ್ಸೂರೇನ್ಸ್‌ ಎಜೆಂಟ್‌ ಆಗಿದ್ದರು ಬೈಂದೂರು ವೃತ್ತ ನಿರೀಕ್ಷಕ ಅರುಣ ನಾಯಕ್‌ ನೇತ್ರತ್ವದ ವಿಶೇಷ ತಂಡ ಪ್ರಕರಣವನ್ನು ಬೇದಿಸಿದೆ. ತನಿಖೆ ಹಿತದೃಷ್ಟಿಯಿಂದ ಪೂರ್ಣ ವಿವರವನ್ನುನೀಡಿಲ್ಲ. ಜಡ್ಕಲ್‌ ಸಮೀಪದ ಕಾಡಿನಲ್ಲಿ ಶವವನ್ನು ಹೂತಿಟ್ಟ ಜಾಗವನ್ನು ಆರೋಪಿ ತೋರಿಸಿದ್ದು ವಿಪರೀತ ಮಳೆಯಾದ ಕಾರಣ ಕಾರ್ಯಚರಣೆಗೆ ಅಡ್ಡಿಯಾಗಿದೆ. ಹೀಗಾಗಿ ಬುಧವಾರ ಶವವನ್ನು ಮೇಲೆತ್ತಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಜಾಗದ ತಕರಾರು ಕೊಲೆ ಶಂಕೆ: ಪೊಲೀಸರು ಈಗಾಗಲೇ ಆರೋಪಿಗಳನ್ನು ವಿಚಾರಣೆ ಮಾಡುತ್ತಿದ್ದು ಜಾಗದ ತಕರಾರಿನ ಹಿನ್ನೆಲೆಯಲ್ಲಿ ಸುಫಾರಿ ಕೊಲೆ ನಡೆದಿದೆ ಎನ್ನುವ ಸಂಶಯ ಕಾಡುತ್ತಿದೆ. ಕೊಲೆ ಮಾಡಲು ಆರೋಪಿ ಆನಂದನಿಗೆ ಪ್ರೇಮಾ ಕುಟುಂಬದ ವ್ಯಕ್ತಿಯೊಬ್ಬರು 25 ಸಾವಿರ ರೂಪಾಯಿ ಸುಫಾರಿ ನೀಡಲಾಗಿದೆ ಎನ್ನಲಾಗುತ್ತಿದೆ. ಪೊಲೀಸ ತನಿಖೆಯಿಂದ ಪೂರ್ಣ ಮಾಹಿತಿ ದೊರೆಯಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ನಡೆದ ಇಂತಹ ಘಟನೆ ಸಾರ್ವಜನಿರನ್ನು ಬೆಚ್ಚಿಬಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com