ಕುಂದಾಪುರ: ಚಿಪ್ಪು ಉದ್ಯಮ ನಡೆಸಿ ವಾಪಾಸ್ ಮರಳುತ್ತಿದ್ದ ದೊಣಿಯೊಂದು ಕುಂದಾಪುರದ ಪಂಚಗಂಗಾವಳಿ ನದಿಯಲ್ಲಿ ಗುರುವಾರ ಮುಳುಗಡೆಯಾಗಿದ್ದು ಅದರಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಂದಾಪುರ ಪಂಚಗಂಗಾವಳಿ ನದಿಯಲ್ಲಿ ಚಿಪ್ಪು ಉದ್ಯಮದಲ್ಲಿ ನಿರತರಾದಾಗ ಮಧ್ಯಾಹ್ನ 1 ಗಂಟೆಯ ವೇಳೆಗೆ ಈ ಘಟನೆ ಸಂಭವಿಸಿದೆ. ಬಲವಾಗಿ ಬೀಸಿದ ಗಾಳಿಯಿಂದಾಗಿ ಈ ಅನಾಹುತ ಸಂಭವಿಸಿದೆ. ದೋಣಿ ಮಗುಚಿದ ಪರಿಣಾಮ ನದಿಯಲ್ಲಿ ಬಿದ್ದ ಶೀನಖಾರ್ವಿ, ಚಂದ್ರ ಹಾಗೂ ಜೋಗಯ್ಯ ಅವರನ್ನು ಹತ್ತಿರದಲ್ಲಿ ಕಿರು ಬಲೆ ದೋಣಿಯಲ್ಲಿ ಸಾಗುತ್ತಿದ್ದ ಮೀನುಗಾರರು ರಕ್ಷಿಸಿದ್ದಾರೆ.
ಪ್ರತಿನಿತ್ಯದಂತೆ ನದಿಯ ಮಧ್ಯೆ ಚಿಪ್ಪು ಸಂಗ್ರಹಿಸಿ ವಾಪಾಸು ದಡಕ್ಕೆ ಬರುತ್ತಿರುವಾಗ ಬಲವಾಗಿ ಬೀಸಿದ ಗಾಳಿಯಿಂದಾಗಿ ದೋಣಿ ಮುಗುಚಿತ್ತು. ನೀರಿಗೆ ಬಿದ್ದ ಕಾರ್ಮಿಕರನ್ನು ಸ್ಥಳೀಯ ಮೀನುಗಾರರಾದ ದಾಮೋದರ ಖಾರ್ವಿ, ಜಗನ್ನಾಥ, ಅಶೋಕ್ ಖಾರ್ವಿ, ನಾರಾಯಣ ಪಾಟೇಲ್ ರಕ್ಷಿಸಿದ್ದಾರೆ.
ನೀರಿನಲ್ಲಿ ಮುಳುಗಿದ ದೋಣಿಯಲ್ಲಿ ಸಂಘ್ರವಾಗಿದ್ದ ಸುಮಾರು 30 ಸಾವಿರ ಮೌಲ್ಯದ ಚಿಪ್ಪು ನದಿ ಪಾಲಾಗಿದೆ ಎಂದು ಅಂದಾಜಿಸಲಾಗಿದೆ.