ಕುಂದಾಪುರ: ವಿವಾಹಿತ ಮಹಿಳೆಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ ಆರೋಪಗಳಿಂದ ಬೈಂದೂರಿನ ಯಡ್ತರೆ ಗ್ರಾಮದ ಅಣ್ಣಪ್ಪ ಹಾಗೂ ಪಾರ್ವತಿಯನ್ನು ಕುಂದಾಪುರದ ಹೆಚ್ಚುವರಿ ನ್ಯಾಯಾಲಯವು ಬಿಡುಗಡೆಗೊಳಿಸಿದೆ.
ಆರೋಪಿ ಅಣ್ಣಪ್ಪ ಫಿರ್ಯಾದುದಾರ್ತಿ ಕೈಯಿಂದ ಹೊಡೆದು, ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಕೂಡಾ ಹಾಕಿದ್ದಾನೆ ಎಂದು ಆರೋಪಿಸಲಾಗಿತ್ತು.
ಬೈಂದೂರಿನ ಹಿಂದಿನ ಆರಕ್ಷಕ ಉಪನಿರೀಕ್ಷಕ ಚೆಲುವರಾಜು ಆರೋಪಿಗಳ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಏಳು ಮಂದಿ ಸಾಕ್ಷಿದಾರರ ವಿಚಾರಣೆಯನ್ನು ಮಾಡಲಾಗಿತ್ತು. ಆರೋಪಿಗಳ ವಿರುದ್ಧ ಮಾಡಲಾದ ಆರೋಪಗಳು ಸಾಕ್ಷಾಧಾರಗಳಿಂದ ರುಜುವಾತು ಆಗಿಲ್ಲದ ಹಾಗೂ ಆರೋಪಿಗಳ ನಡುವೆ ಅನೈತಿಕ ಸಂಬಂಧಕ್ಕೆ ಪುರಾವೆಗಳಿಲ್ಲವೆಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಆರೋಪಿ ಅಣ್ಣಪ್ಪ ಹಾಗೂ ಪಾರ್ವತಿ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.