ಬೈಂದೂರು ಸರ್ವೆಯರ್‌ ಲೋಕಾಯುಕ್ತರ ಬಲೆಗೆ

ಬೈಂದೂರು: ಇಲ್ಲಿನ ವಿಶೇಷ ತಹಶೀಲ್ದಾರರ ಕಛೇರಿಯ ಭೂಮಾಪನ ವಿಭಾಗದ‌ ಸರ್ವೆಯರ್‌ ದಿವಾಕರ ಎನ್ನುವವರು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತರು ಬಂದಿಸಿದ್ದಾರೆ.
        ಪಡುವರಿ ಗ್ರಾ. ಪಂ. ಸದಸ್ಯ  ನಾಗೇಶ್ ಖಾರ್ವಿಯ ಅತ್ತೆ  ಲಕ್ಷ್ಮಿ, ಪಡುವರಿ ಗ್ರಾಮದ ಸರ್ವೇ ನಂಬ್ರ 25/06 ಮತ್ತು 25/01ರ ಜಾಗದ ನಕ್ಷೆ ಮಾಡಲು ಅರ್ಜಿ ಸಲ್ಲಿಸಿ ಶೀಘ್ರವಾಗಿ ನಕ್ಷೆ ತಯಾರಿಸಿಕೊಡಲು ಕೇಳಿಕೊಂಡಿದ್ದರು. ಆದರೆ ಸರ್ವೇಯರ್ ಇದನ್ನು ಮಾಡಿಕೊಡಲು 2,000 ರೂ ಕೊಡುವಂತೆ ಬೇಡಿಕೆಯಿಟ್ಟಿದ್ದ. ಈ ಬಗ್ಗೆ ತನ್ನ ಅಳಿಯ ವಿಷಯ ತಿಳಿಸಿದಾಗ ಆತ ಕಛೇರಿಗೆ ಬಂದು ಅಧಿಕಾರಿಯ ಜೊತೆ ಮಾತುಕತೆ ನಡೆಸಿ ಮೊಬೈಲ್‌ನಲ್ಲಿ ಧ್ವನಿ ಮುದ್ರಿಸಿಕೊಂಡು ಲೋಕಾಯುಕ್ತಕ್ಕೆ ದೂರು ನೀಡಿದ್ದರು.  ಲೋಕಾಯುಕ್ತರ ನಿರ್ದೇಶನದಂತೆ ನಾಗೇಶ್ ಅಧಿಕಾರಿಗೆ 2,000 ರೂ ನೀಡುತ್ತಿರುವಾಗ ಸ್ಥಳದಲ್ಲೇ ಇದ್ದ ಲೋಕಾಯುಕ್ತ ಪೋಲಿಸರು ನಗದು ಸಹಿತ ಆರೋಪಿಯನ್ನು ಹಿಡಿದು ನಂತರ ನಿಯಮಾನುಸಾರ ತನಿಖೆ ನಡೆಸಿದರು.
       ಲೋಕಾಯುಕ್ತ ಡಿವೈ‌ಎಸ್‌ಪಿ ವಿಠಲ್‌ದಾಸ್ ಪೈ, ಮಾರ್ಗದರ್ಶನದಲ್ಲಿ ಪೋಲಿಸ್ ಇನಸ್ಪೇಕ್ಟರ್ ದಿನೇಶ್ ಕುಮಾರ್ ಬಿ.ಪಿ, ಸಿಬ್ಬಂದಿಗಳಾದ ನಾಗೇಶ್ ಉಡುಪ, ರಘುರಾಮ, ರಾಮಚಂದ್ರ ಭಟ್, ದಿವಾಕರ್ ಶರ್ಮ, ಉಮೇಶ್, ಶೋಬಾ, ದಿನೇಶ್, ಶಿವರಾಯ ಬಿಲ್ಲವ, ಅಶೋಕ, ಸಂತೋಷ, ಲಕ್ಷ್ಮೀಧರ ಸೇತಿ, ಶ್ರೀಧರ ಮತ್ತು ರಿಯಾಜ್ ಅಹಮದ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com