ಕುಂದಾಪುರ-ಬೈಂದೂರಿನಲ್ಲಿ ಬಿರುಸಿನ ಶಾಂತಿಯುತ ಮತದಾನ


ಕುಂದಾಪುರ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ  ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಹಾಗೂ ಶಾಂತಿಯುತ ಮತದಾನ ನಡೆಯಿತು.  ಬೆಳಿಗ್ಗೆ 7 ರಿಂದಲೇ ಮತದಾನ ಪ್ರಕ್ರಿಯೆ ಆರಂಭಗೊಂಡು ಮತದಾರರು ಉತ್ಸಾಹದಿಂದ ತಮ್ಮ ಮತ ಚಲಾಯಿಸಿದರು.
   ಕುಂದಾಪುರ ವಿಧಾನಸಭಾ ಕ್ಷೇತ್ರದ  ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಕುಂದಾಪುರ ಯು.ಬಿ.ಎಮ್.ಸಿ. ಪ್ರಾಥಮಿಕ ಶಾಲೆಯಲ್ಲಿ , ಕಾಂಗ್ರೆಸ್ ಅಭ್ಯರ್ಥಿ ಮಲ್ಯಾಡಿ ಶಿವರಾಮ ಶೆಟ್ಟಿ ತೆಕ್ಕಟ್ಟೆಯ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಲಾಡಿಯ ಹಿ. ಪ್ರಾ. ಶಾಲೆಯಲ್ಲಿ , ಸಂಸದ ಕೆ. ಜಯಪ್ರಕಾಶ ಹೆಗ್ಡೆ ಕೊರ್ಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲ್ಲಿ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೇಟ್ಟಿ ಹೈಕಾಡಿ ಹಿ.ಪ್ರಾ. ಶಾಲೆಯಲ್ಲಿ  ಮತದಾನ ನಡೆಸಿದರು.


    
    ಬೈಂದೂರು ಕ್ಷೇತ್ರದ ಕಾಂಗ್ರೇಸ ಅಭ್ಯರ್ಥಿ ಗೋಪಾಲ್ ಪೂಜಾರಿ ಕಟ್ ಬೆಲ್ತೂರು ಹಿ.ಪ್ರಾ ಶಾಲೆಯಲ್ಲಿ, ಬಿಜೆಪಿ ಅಭ್ಯರ್ಥಿ ಸುಕುಮಾರ್ ಶೆಟ್ಟಿ ಅವರು ಬೆಳ್ಳಾಲ ಹಿ.ಪ್ರಾ. ಶಾಲೆಯಲ್ಲಿ, ಕೆಜೆಪಿಯ ನವೀನಚಂದ್ರ ಉಪ್ಪುಂದ ಇಲ್ಲಿನ ಜುನಿಯರ್ ಕಾಲೇಜಿನಲ್ಲಿ, ಜೆಡಿಎಸ್ ನ ಸುರಯ್ಯ ಭಾಸು ಬೈಂದೂರಿನ ಉರ್ದು ಹಿ. ಪ್ರಾ. ಶಾಲೆಯಲ್ಲಿ ಮತದಾನ ನಡೆಸಿದರು.

ಡಿಮಸ್ಟರಿಂಗ್‌ ಕೇಂದ್ರಗಳಾದ ಬೈಂದೂರು - ಕುಂದಾಪುರ ಕ್ಷೇತ್ರಗಳ ಕುಂದಾಪುರದ ಭಂಡಾರ್‌ಕಾರ್ ಕಾಲೇಜಿಗೆ ಅಧಿಕಾರಿಗಳು, ಸಿಬಂದಿಗಳು ರವಿವಾರ ರಾತ್ರಿ ಮತ ಯಂತ್ರಗಳನ್ನು ಬಂದೋಬಸ್ತ್ನಲ್ಲಿ ತಂದು ಸ್ಥಾಪಿಸಿದರು. ಡಿಮಸ್ಟರಿಂಗ್‌ ಕೇಂದ್ರದಲ್ಲಿ ರವಿವಾರ ರಾತ್ರಿ ವಾಹನಗಳ ಸಾಲು, ಅಧಿಕಾರಿಗಳು, ಸಿಬಂದಿಗಳು ಮತಗಟ್ಟೆಗಳಿಗೆ ಕೊಂಡೊಯ್ದ ಸಾಮಾನು ಸರಂಜಾಮು, ಮತಯಂತ್ರಗಳ ಸಾಲು, ಮತಯಂತ್ರಗಳನ್ನು ತುಂಬಿಕೊಂಡ ಭದ್ರತಾ ಕೊಠಡಿಗಳು ಕಂಡುಬಂದವು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com