ಮಳೆಗಾಲ ಮಾತ್ರವಲ್ಲ ಬೇಸಿಗೆ ಮಳೆಯಲ್ಲೂ ಕುಸಿತ


ಉಡುಪಿ: ಮಳೆಗಾಲದಲ್ಲಿ ಬೀಳುವ ಹಾಗೂ ಬೇಸಿಗೆಯಲ್ಲಿ ಜನವರಿಯಿಂದ ಮೇ ತನಕ ಬೀಳುವ ಮಳೆಯ ಪ್ರಮಾಣವೂ ಕಳೆದ ಮೂರು ವರ್ಷಗಳಿಂದ ಕುಸಿಯುತ್ತಿದೆ.
2008ರಲ್ಲಿ ದಶಕದಲ್ಲೇ ಅತಿ ಕಡಿಮೆ(3,311 ಮಿ.ಮೀ.) ಮಳೆ ದಾಖಲಾಗಿದ್ದರೆ 2009, 2010, 2011ರಲ್ಲಿ 4,500 ಮಿ.ಮೀ.ಗಿಂತ ಅಧಿಕ ಮಳೆಯಾಗಿದೆ.
2007ರಿಂದ 2010ರ ತನಕದ ಜನವರಿ-ಮೇ ತನಕ 126, 367, 227, 234 ಮಿ.ಮೀ. ಮಳೆಯಾಗಿದೆ. 2011ರಲ್ಲಿ 83.90, 2012ರಲ್ಲಿ 76 ಹಾಗೂ 2013ರಲ್ಲಿ ಕೇವಲ 65 ಮಿ.ಮೀ. ಮಳೆ ಬಿದ್ದಿದೆ. 2013ರ ಜನವರಿಯಲ್ಲಿ 4.30 ಮಿ.ಮೀ., ಫೆಬ್ರವರಿ: 5 ಮಿ.ಮೀ. ಮಾರ್ಚ್: 4.4 ಮಿ.ಮೀ., ಏಪ್ರಿಲ್: 50 ಮಿ.ಮೀ., ಮೇ ತಿಂಗಳಲ್ಲಿ ಉಡುಪಿ ತಾಲೂಕಿನಲ್ಲಿ ಮಾತ್ರ 1.9 ಮಿ.ಮೀ. ಮಳೆಯಾಗಿದೆ.
ಉಡುಪಿಯಲ್ಲಿ ಅತ್ಯಧಿಕ 38 ಡಿಗ್ರಿ ಸೆಲ್ಶಿಯಸ್ ಉಷ್ಣತೆ ದಾಖಲಾಗಿದೆ. ಹೆಬ್ರಿ, ಕುಂದಾಪುರ, ಉಡುಪಿಯಲ್ಲಿ ಉತ್ತಮ ಮಳೆಯಾದರೂ ಉಳಿದೆಡೆ ಮಳೆ ಸಮ ಪ್ರಮಾಣದಲ್ಲಿ ಬಿದ್ದಿಲ್ಲ. ಮಳೆ ಪ್ರಮಾಣ ಕಡಿಮೆಯಾಗಿ, ವಾತಾವರಣದಲ್ಲಿ ತೇವಾಂಶವಿಲ್ಲದ ಹಿನ್ನೆಲೆಯಲ್ಲಿ ಉಷ್ಣತೆ ಹೆಚ್ಚಿದೆ.

 ಸರಾಸರಿ ಮಳೆ ಪ್ರಮಾಣದಲ್ಲಿ ಹೆಚ್ಚೇನೂ ವ್ಯತ್ಯಾಸವಾಗಿಲ್ಲ. ಅಕಾಲಿಕ ಮಳೆ, ಅತಿವೃಷ್ಟಿ , ಬೀಳುವ ಮಳೆಯ ಅಸಮತೋಲನ ಸಮಸ್ಯೆಯಾಗಿದೆ. ಮುಂಗಾರು ಮಳೆ ಆರಂಭ 15-20 ಮುಂದೆ ಹೋಗಿದೆ. ಜಾಗತಿಕ ತಾಪಮಾನ ಏರಿಕೆ, ಕಾಡು, ಪರಿಸರ ನಾಶ ಇದಕ್ಕೆಲ್ಲಾ ಕಾರಣ. ನಗರಗಳಲ್ಲಿ ಕಾಂಕ್ರೀಟು ರಸ್ತೆ, ಕಟ್ಟಡಗಳಿಂದಾಗಿ ರೇಡೀಯೇಶನ್ ಸಮಸ್ಯೆಯಿದೆ. ಸೆಖೆಯ ಜತೆ ಮೈ ಉರಿ ಹೆಚ್ಚಿದೆ.
-ಪರಿಸರ ತಜ್ಞ ಡಾ. ಎನ್.ಎ. ಮಧ್ಯಸ್ಥ 

ವರ್ಷ ಮಳೆ ಪ್ರಮಾಣ ಜನವರಿ-ಮೇ
2008 3,311 367
2009 4,527 227
2010 4,843 234
2011 4,686 84
2012 4,061 76
2013 - 65

ಇನ್ನೂ ಐದು ದಿನ 50 ಕಿ.ಮೀ. ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣವಿದ್ದರೂ ಮಳೆಯಾಗದು. ಅಂಡಮಾನ್ ನಿಕೋಬಾರ್‌ನಲ್ಲಿ ಮೋಡಗಳು ಕೇಂದ್ರೀಕೃತವಾಗಿದ್ದು ಜೂ. 3ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶಿಸಿದರೆ ಮುಂದಿನ ವಾರದಲ್ಲಿ ಕರಾವಳಿಯಲ್ಲಿ ಮಳೆಗಾಲ ಆರಂಭ.
-ಡಾ. ಧನಂಜಯ್, ಸಹ ಪ್ರಾಧ್ಯಾಪಕರು, ಕೃಷಿ ವಿಸ್ತರಣೆ, ಬ್ರಹ್ಮಾವರ ವಲಯ ಕೃಷಿ ಸಂಶೋಧನಾ ಕೇಂದ್ರ.


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com