26ಕ್ಕೆ ಸಿದ್ದಾಪುರದಲ್ಲಿ 'ಲಗ್ನಾ ಪಿಶ್ಯೆಂ'- ಕೊಂಕಣಿ ಹಾಸ್ಯ ನಾಟಕ


ಕುಂದಾಪುರ: ಮುಂಬೈ ನಗರದಲ್ಲಿ ಜಯಭೇರಿ ಭಾರಿಸಿದ ಬಾಲಕೃಷ್ಣ ಪುರಾಣಿಕ್ ಬರೆದ 'ಲಗ್ನಾ ಪಿಶ್ಯೆಂ' ಎಂಬ ಕೊಂಕಣಿ ಹಾಸ್ಯ ನಾಟಕದ 4 ಪ್ರದರ್ಶನಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 25ರಿಂದ 28ರವರೆಗೆ ಆಯೋಜಿಸಲಾಗಿದೆ.
ಲಿಮ್ಕಾ ದಾಖಲೆ ಖ್ಯಾತಿಯ ಹಾಸ್ಯ ರಂಗನಟ ಕಮಲಾಕ್ಷ ಸರಾಫ, ಲಿಮ್ಕಾ ದಾಖಲೆ ಖ್ಯಾತಿಯ ನಿರ್ದೇಶಕ ಡಾ. ಚಂದ್ರಶೇಖರ್ ಶೆಣೈ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುರಸ್ಕೃತ ಎ.ಜಿ. ಕಾಮತ್, ಲಿಮ್ಕಾ ಖ್ಯಾತಿಯ ಬೆಳಕು ಸಂಯೋಜಕ ಗಣಪತಿ ಕಾಮತ್ ಹಾಗೂ ಇನ್ನಿತರರ ಕಲಾವಿದರಿರುವ ಮುಂಬೈಯ ವಡಾಲದ ರಾಮಸೇವಕ ಸಂಘ ಈ ನಾಟಕವನ್ನು ಪ್ರಸ್ತುತಪಡಿಸಲಿದ್ದಾರೆ.
ಮೇ 25ರಂದು ಕಾರ್ಕಳದ ಮಿಯಾರು ಗೋವಿಂದ ಪೈ ಸ್ಮಾರಕ ಹಾಲ್ ಮತ್ತು ಮಂಗಳೂರಿನ ಉರ್ವಾದ ಕೆನರಾ ಹೈಸ್ಕೂಲ್, 26ರಂದು ಕುಂದಾಪುರದ ಸಿದ್ದಾಪುರದ ಕೆಳಪೇಟೆಯ ರಂಗನಾಥ ಸಭಾ ಭವನ, ಮೇ 27ರಂದು ಉಡುಪಿಯ ಶ್ರೀ ಲಕ್ಷೀ ವೆಂಕಟರಮಣ ದೇವಸ್ಥಾನ ಭುವನೇಂದ್ರ ರಂಗಮಂಟಪದಲ್ಲಿ, 28ರಂದು ಗಂಗೊಳ್ಳಿಯ ಮಲ್ಯರ ಮಠದ ದ್ವಾರಕಾನಾಥ ರಂಗಮಂಟಪದಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದೆ.  

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com