ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗೆಲುವು

ಉಡುಪಿ: ವಿಧಾನಸಭಾ ಚುನಾವಣೆಯ ಉಡುಪಿ ಕ್ಷೇತ್ರದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗೆಲುವಿನ ಕುದುರೆ ಏರಿದ್ದಾರೆ. 29,524 ಮತಗಳ ಬಾರಿ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಕರ್ ಶೆಟ್ಟಿಯವರನ್ನು ಮಣಿಸಿದ್ದಾರೆ.
      ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ವಿಜೋತ್ಸವನ್ನು ಆಚರಿಸಿದ್ದಾರೆ. ಪ್ರತಿಸ್ವರ್ಧಿ ಸುಧಾಕರ್ ಶೆಟ್ಟಿ 47344 ಮತಗಳನ್ನು ಪಡೆದುಕೊಂಡರೆ, ಕಾಂಗ್ರೇಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ 86868 ಮತಗಳನ್ನು ಪಡೆದುಕೊಂಡು ಜಯಭೇರಿಯಾಗಿದ್ದಾರೆ.
       39524 ಮತಗಳ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ. 15 ಸುತ್ತುಗಳಲ್ಲಿ ಮತ ಏಣಿಕೆ ಕಾರ್‍ಯ ನಡೆದಿದ್ದು, ಪ್ರಥಮ ಸುತ್ತಿನಿಂದಲೇ ಬಾರಿ ಅಂತರ ಖಾಯ್ದುಕೊಳ್ಳುವ ಮೂಲಕ ಜಯಭೇರಿಯಾಗಿದ್ದರು. ಇದೇ ಕ್ಷೇತ್ರದ ಜೆಡಿ‌ಎಸ್ ಅಭ್ಯರ್ಥಿ ಸತೀಶ್ ಪೂಜಾರಿ ಕೇವಲ 1070 ಮತಗಳನ್ನು ಪಡೆದುಕೊಳ್ಳುವ ಮೂಲಕ ಠೇವಣಿ ಕಳೆದುಕೊಂಡರು.
        ಈ ಸಂದರ್ಭದಲ್ಲಿ ಇಡೀ ಕ್ಷೇತ್ರದ ಮತದಾರರಿಗೆ ಮತ್ತು ಕಾರ್‍ಯಕರ್ತರಿಗೆ ಕೃತಜ್ಞತೆ ಸಲ್ಲಿಸಿ, ಕ್ಷೇತ್ರದ ಅಭಿವೃದ್ದಿಗಾಗಿ ದುಡಿಯುದ್ದಾಗಿ ಹೇಳಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com