ಜಿಲ್ಲೆಯಲ್ಲಿ 22 ಮಂದಿಯಿಂದ ಮತದಾನ ನಿರಾಕರಣೆ

ಉಡುಪಿ: ವಿಧಾನಸಭಾ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 22 ಮಂದಿ ಮತದಾರರು ಮತ ನಿರಾಕರಣೆಯ ನಿಯಮ 49 (ಓ) ಬಳಕೆ ಮಾಡಿ ಚುನಾವಣೆಯಲ್ಲಿ ಭಾಗವಹಿಸಿದ್ದಾರೆ. ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿಯೇ ಇಷ್ಟು ಮಂದಿ ಈ ನಿಮಯ ಬಳಕೆ ಮಾಡಿರುವುದು ಒಂದು ದಾಖಲೆಯಾಗಿದೆ. ಮತದಾರರೊಬ್ಬರಿಗೆ ತಮ್ಮ ಕ್ಷೇತ್ರದ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಯಾರಿಗೂ ಮತ ನೀಡುವ ಇಚ್ಚೆ ಇಲ್ಲದಿದ್ದಲ್ಲಿ ಆಗ ಈ ನಿಯಮ 49 (ಓ)ದಂತೆ ಮತದಾನ ಕೇಂದ್ರಕ್ಕೆ ಹೋಗಿ ತನಗೆ ಮತದಾನ ಮಾಡುವ ಇಚ್ಚೆ ಇಲ್ಲ ಎಂದು ತಿಳಿಸಬಹುದಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಈ ರೀತಿ 22 ಮಂದಿ ಈ ಹಕ್ಕು ಬಳಸಿ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.

ಕುಂದಾಪ್ರ ಡಾಟ್ ಕಾಂ - editor@kundapra.com

22 Voters in Udupi district refused to vote as per law
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com