ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ನಿಶ್ಚಿತ: ಸಂಸದ ಜ. ಹೆಗ್ಡೆ


ಕುಂದಾಪುರ: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಲಿದ್ದು, ಕಾಂಗ್ರೆಸ್‌ ಸರಕಾರ ನಡೆಸುವುದು ನಿಶ್ಚಿತ ಎಂದು ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದ್ದಾರೆ.
        ಅವರು ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಕುಂದಾಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಲ್ಯಾಡಿ ಶಿವರಾಮ ಶೆಟ್ಟಿ ಅವರ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದರು.
     ಶಾಸಕನಾದವನಿಗೆ ತನ್ನ ಕ್ಷೇತ್ರವಲ್ಲದೇ ರಾಜ್ಯದ ಹಿತವೂ ಮುಖ್ಯ. ರಾಜ್ಯ ಸರಕಾರದ ಅನುದಾನ ಹಾಗೂ ಕೇಂದ್ರ ಸರಕಾರದ ಅನುದಾನಗಳನ್ನು ಸಮರ್ಪಕ ಅನುಷ್ಠಾನಗೊಳಿಸುವಲ್ಲಿ ಶಾಸಕನ ಪಾತ್ರ ಮಹತ್ತರ. ಅಲ್ಲದೇ ಸದನದಲ್ಲಿ ರಾಜ್ಯ ಹಾಗೂ ಕ್ಷೇತ್ರದ ಅಭಿವೃದ್ಧಿ ಪರ ಚಿಂತನೆ, ಚರ್ಚೆಗಳನ್ನು ಶಾಸಕರು ಮಾಡಬೇಕಾಗಿದೆ ಎಂದು ಅವರು ಹೇಳಿದರು.
      ಕೇಂದ್ರ ಸರಕಾರ ಶಿಕ್ಷಣಕ್ಕಾಗಿ ಸರ್ವ ಶಿಕ್ಷ ಅಭಿಯಾನ, ಆರೋಗ್ಯಕ್ಕಾಗಿ ಆಯುಷ್‌ ಹಾಗೂ ಗ್ರಾಮೀಣ ವಿದ್ಯುದ್ದೀಕರಣ ವ್ಯವಸ್ಥೆಗೆ ರಾಜೀವ ಗಾಂಧಿ ವಿದ್ಯುದ್ದೀಕರಣ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದನ್ನು ರಾಜ್ಯದಲ್ಲಿ ಸಮರ್ಪಕ ಕಾರ್ಯರೂಪಕ್ಕೆ ತರುವಲ್ಲಿ ಶಾಸಕರ ಪಾತ್ರವೂ ಬಹುಮುಖ್ಯ. ಈ ನಿಟ್ಟಿನಲ್ಲಿ ತಳಮಟ್ಟದ ರಾಜಕಾರಣದಿಂದ ಬೆಳೆದು ಬಂದು ರಾಜಕೀಯದ ಒಳಹೊರಗನ್ನು ಅರಿತಿರುವ, ಜನ ಸಾಮಾನ್ಯರೊಂದಿಗೆ ಬೆರೆಯುವ ಸಜ್ಜನ ರಾಜಕಾರಣಿ ಮಲ್ಯಾಡಿ ಶಿವರಾಮ ಶೆಟ್ಟಿ ಅವರನ್ನು ಆರಿಸಬೇಕಾದ ಅನಿವಾರ್ಯತೆ ಇದೆ ಎಂದರು.
 ಕಾಂಗ್ರೆಸ್‌ ಅಭ್ಯರ್ಥಿ ಮಲ್ಯಾಡಿ ಶಿವರಾಮ ಶೆಟ್ಟಿ ಮತ ಯಾಚಿಸಿದರು.
    ಕಾಂಗ್ರೆಸ್‌ ಮುಖಂಡ ಮಾಣಿಗೋಪಾಲ್‌, ವಕ್ತಾರ ರಾಮಕೃಷ್ಣ ಹೇಳೆì, ಕಾಳಪ್ಪ ಪೂಜಾರಿ ಮಾತನಾಡಿದರು.
ಕೋಟ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಂಕರ್‌ ಕುಂದರ್‌, ದಿನಕರ ಶೆಟ್ಟಿ, ಕೃಷ್ಣದೇವ ಕಾರಂತ ಕೋಣಿ, ಹೆರಿಯಣ್ಣ, ಹಾರೂನ್‌ ಸಾಹೇಬ್‌, ವಿನಯ ಕುಮಾರ್‌ ಕಬ್ಯಾಡಿ, ದೇವಕಿ ಸಣ್ಣಯ್ಯ, ಜ್ಯೋತಿ ಪುತ್ರನ್‌, ವಿನೋದ್‌ ಕ್ರಾಸ್ತಾ, ಗಣೇಶ್‌ ಶೇರುಗಾರ್‌, ವಿಕಾಸ್‌ ಹೆಗ್ಡೆ, ಉದಯಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
   ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ಕೋಣಿ ನಾರಾಯಣ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಸಭೆಗೂ ಮೊದಲು ನಡೆದ ರೋಡ್‌ ಶೋಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಆಸ್ಕರ್‌ ಫೆನಾಂಡಿಸ್‌ ಚಾಲನೆ ನೀಡಿದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com