ಬಿಜೆಪಿಯಿಂದ ಜನತೆಗೆ ಭ್ರಮನಿರಸನ: ಪ್ರತಾಪಚಂದ್ರ ಶೆಟ್ಟಿ


ಸಿದ್ದಾಪುರ: ರಾಜ್ಯ ಸರಕಾರದ ಆಡಳಿತ ವೈಖರಿ ಸಂಪೂರ್ಣ ಹದಗೆಟ್ಟು ಹೋಗಿದೆ. ಬಿಜೆಪಿಯು ಜನತೆ ಕೊಟ್ಟ ಅಧಿವಕಾಶವನ್ನು ದುರುಪಯೋಗ ಪಡಿಸಿಕೊಂಡು ಜನತೆಗೆ ಅವಮಾನ ಮಾಡಿದೆ. ಬಿಜೆಪಿ ಸರಕಾರದ ಬಗ್ಗೆ ರಾಜ್ಯದ ಜನತೆ ಭ್ರಮನಿರಸಗೊಂಡಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಹೇಳಿದರು.

ಅವರು ಬೈಂದೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರ ಪರವಾಗಿ ಸಿದ್ದಾಪುರದಲ್ಲಿ ಬುಧವಾರ ಸಂಜೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಪ್ರತಿಯೋರ್ವ ಪ್ರಜೆ ಸ್ವಾವಲಂಬಿ ಬದುಕಿಗೆ ಕಾಂಗ್ರೆಸ್‌ ಕಾರಣವಾಗಿದೆ. ರಾಜ್ಯದ ಜನತೆಗೆ ಕಾಂಗ್ರೆಸ್‌ ಸರಕಾರವು ಭೂಮಸೂದೆ, ಅಕ್ರಮ ಸಕ್ರಮ ಕಾಯಿದೆ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳನ್ನು ನೀಡಿದೆ. ಇವೆಲ್ಲವೂ ಕಾರ್ಯಕ್ರಮಗಳು ಶಾಶ್ವತ ಫಲವನ್ನು ನೀಡಿರುವ ಕಾರ್ಯಕ್ರಮಗಳಾಗಿವೆ. ಇದರೊಂದಿಗೆ ಈ ಯೋಜನೆಗಳು ಮುಂದುವರಿಯಲು ಹಾಗೂ ಮತ್ತಷ್ಟು ಯೋಜನೆಗಳು ಕಾರ್ಯರೂಪಕ್ಕೆ ಬರಲು ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅನಿವಾರ್ಯ ಎಂಬ ವಿಚಾರವನ್ನೂ ಮತದಾರರಿಗೆ ತಿಳಿಸುವ ಮಹತ್ವದ ಜವಾಬ್ದಾರಿ ಕಾರ್ಯಕರ್ತರಿಗಿದೆ. ಈ ಸಲ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರನ್ನು ಬೆಂಬಲಿಸಬೇಕಾಗಿದೆ ಎಂದರು.

ಕಾಂಗ್ರೆಸ್‌ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಮಾತನಾಡಿ, ರಾಜ್ಯದ ಬಿಜೆಪಿ ಸರಕಾರ ಭ್ರಷ್ಟಚಾರ, ಅನೈತಿಕತೆಯಲ್ಲಿ ಮುಳುಗಿ ಜನತೆಗೆ ಅವಮಾನ ಮಾಡಿದೆ. ದೇಶದ ಭವಿಷ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಪಕ್ಷದ ಅಧಿಕಾರ ಅನಿವಾರ್ಯವಾಗಿದೆ. ನನ್ನನ್ನು ಚುನಾವಣೆಯಲ್ಲಿ ಗೆಲಿಸಿದಲ್ಲಿ ಒಂದೇ ಜಾತಿ ಒಂದೇ ಮತದ ತಣ್ತೀದ ಅಡಿಯಲ್ಲಿ ಕೆಲಸ ಮಾಡಿ ಕ್ಷೇತ್ರದ ಮತದಾರರ ಋಣವನ್ನು ತೀರಿಸುತ್ತೇನೆ ಎಂದು ಹೇಳಿದರು.

ಮುಖಂಡ ಮಾಣಿಗೋಪಾಲ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಕಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ವಾಸುದೇವ ಯಡಿಯಾಳ, ಕೆಸಿಸಿ ಸದಸ್ಯರಾದ ಹರಿಪ್ರಸಾದ್‌ ಆಚಾರ್ಯ ಶಂಕರನಾರಾಯಣ, ರಘರಾಮ ಶೆಟ್ಟಿ, ತಾ.ಪಂ. ಸದಸ್ಯ ಪ್ರದೀಪ ಕುಮಾರ ಶೆಟ್ಟಿ, ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷ ಸದಾನಂದ ಭಂಡಾರಿ, ಮಾಜಿ ಅಧ್ಯಕ್ಷರಾದ ಚಂದ್ರವತಿ ಎಸ್‌. ಶೆಟ್ಟಿ, ವಿಶಾಲಾಕ್ಷಿ, ರಾಜು ಪೂಜಾರಿ ವಳಾಲು, ಸಿದ್ದಾಪುರ ಸಿ.ಎ. ಬ್ಯಾಂಕ್‌ ಅಧ್ಯಕ್ಷ ಎಸ್‌.ಕೆ. ವಾಸುದೇವ ಪೈ, ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಶಂಕರ ಶೆಟ್ಟಿ ಜವಳ್ಳಿ, ಮಾಜಿ ಅಧ್ಯಕ್ಷೆ ಪ್ರೇಮ ಪೂಜಾರಿ, ಅಂಪಾರು ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಕಿರಣ ಹೆಗ್ಡೆ, ಸಂತೋಷ್‌ ಕುಮಾರ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಎಸ್‌. ಸುಧಾಕರ ಕುಲಾಲ, ತಾ.ಪಂ. ಮಾಜಿ ಸದಸ್ಯ ಕೆರಾಡಿ ನಾಗಪ್ಪ ಕೊಠಾರಿ, ಸ್ಥಳೀಯ ಮುಖಂಡರಾದ ಚೋನಮನೆ ಅಶೋಕ ಶೆಟ್ಟಿ, ಎಚ್‌. ಸುಧಾಕರ ಶೆಟ್ಟಿ, ವಂಡ್ಸೆ ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ಕೆ. ಸತೀಶ ಕುಮಾರ ಶೆಟ್ಟಿ ಮುಂತಾದವರು ಉಪಸ್ಥಿತರಿದರು.

ವಂಡ್ಸೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com