ಆಲೂರು: ಗ್ರಾಮದ ಆಲೂರು ಪೇಟೆಯಲ್ಲಿ ನವೀಕರಣಗೊಂಡ ಶ್ರೀ ನಾಗ, ಶ್ರೀ ಚೌಂಡಿಯಮ್ಮ ಮತ್ತು ಶ್ರೀ ರಕ್ತಕಾಳಿ ಶ್ರೀದೇಗುಲ ಸಮರ್ಪಣೆ ಮತ್ತು ಶ್ರೀ ದೇವರ ಪುನರ್ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಶುಕ್ರವಾರ ಜರಗಿದ ಧಾಮರ್ಿಕ ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಆಲೂರು ಶ್ರೀ ಮಾರಿಕಾಂಬಾ ದೇವಸ್ಥಾನದ ಮೊಕ್ತೇಸರ ಅಪ್ಪು ಕುಲಾಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆಲೂರು ಗ್ರಾಮ ಕರಣಿಕ ಅಶೋಕ್ಕುಮಾರ್ ಮತ್ತು ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿ ಶ್ರೀ ನಾಗ, ಶ್ರೀ ಚೌಂಡಿಯಮ್ಮ ಮತ್ತು ಶ್ರೀ ರಕ್ತಕಾಳಿ ದೇವಸ್ಥಾನದ ಅಧ್ಯಕ್ಷ ಸುಬ್ರಾಯ ಕುಲಾಲ್, ಸಿಗಂದೂರು ಶ್ರೀ ಚೌಡೇಶ್ವರಿ ಕೃಪಾಪೋಷಿತ ಯಕ್ಷಗಾನ ಮೇಳದ ಸಂಚಾಲಕ ಎಂ. ಗುಂಡು ಕಾಂಚನ್, ದೇವಸ್ಥಾನದ ಅರ್ಚಕ ಮತ್ತು ಪಾತ್ರಿ ರಘುರಾಮ ಕುಲಾಲ್, ಸೀತು ಕುಲಾಲ್ ಹಾಗೂ ದೇವಸ್ಥಾನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಮಹೇಶ್ ಕುಲಾಲ್ ಸ್ವಾಗತಿಸಿದರು. ಗ್ರಾ. ಪಂ. ಸದಸ್ಯ ಪ್ರಶಾಂತ್ ಕುಲಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು. ಸಂತೋಷ್ ಪೂಜಾರಿ ಆಲೂರು ಅವರು ವಂದಿಸಿದರು. ಧಾಮರ್ಿಕ ಸಭಾ ಕಾರ್ಯಕ್ರಮದ ಬಳಿಕ ಸಿಗಂದೂರು ಮೇಳದ ಕಲಾವಿದರಿಂದ ಶ್ರೀ ಕಪ್ಪಣ್ಣ ಕ್ಷೇತ್ರ ಮಹಾತ್ಮ್ಯೆ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.
ಕುಂದಾಪ್ರ ಡಾಟ್ ಕಾಂ - editor@kundapra.com