ಶಾಸಕರುಗಳ ನಿಷ್ಕ್ರಿಯತೆಯಿಂದ ಬೈಂದೂರು ಕ್ಷೇತ್ರ ನಿರ್ಲಕ್ಷಿಸಲ್ಪಟ್ಟಿದೆ: ಸಿಪಿಎಂ ಆರೋಪ


ಕುಂದಾಪುರ: ಮತದಾರರು ಎರಡು ಅವಧಿಗೆ ಆರಿಸಿದ್ದ ಕಾಂಗ್ರೆಸ್‌ನ ಗೋಪಾಲ ಪೂಜಾರಿ ಮತ್ತು ಅವರ ನಂತರ ಆರಿಸಿದ್ದ ಬಿಜೆಪಿಯ ಕೆ. ಲಕ್ಷ್ಮೀನಾರಾಯಣ ಅವರ ನಿಷ್ಕ್ರಿಯತೆಯಿಂದಾಗಿ ಬೈಂದೂರು ಕ್ಷೇತ್ರ ಸಂಪೂರ್ಣ ನಿರ್ಲಕ್ಷಿಸಲ್ಪಟ್ಟಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ನಿತ್ಯಾನಂದಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
       ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಂದೂರು ಕ್ಷೇತ್ರದಲ್ಲಿ ಜನತೆಯನ್ನು ನಿರಾಶೆಗೊಳಿಸಿರುವ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಸಿಪಿಎಂನತ್ತ ಮತದಾರರ ಒಲವು ಹೆಚ್ಚಿದೆ ಎಂದು  
ಇಲ್ಲಿ ಇನ್ನೂ ಅನೇಕ ಮನೆಗಳಿಗೆ ವಿದ್ಯುತ್ ಸಂಪರ್ಕವಾಗಿಲ್ಲ, ಕ್ಷೇತ್ರದಾದ್ಯಂತ ಕುಡಿಯುವ ನೀರಿನ ಸಮಸ್ಯೆ ಇದೆ. ಹಳ್ಳಿ ಸಂಪರ್ಕ ರಸ್ತೆಗಳಿಲ್ಲ. ಒಟ್ಟಿನಲ್ಲಿ ಮತದಾರರು ಪರ್ಯಾಯವನ್ನು ಬಯಸುತ್ತಿದ್ದು, ಅವರ ನಿರೀಕ್ಷೆಯಂತೆ ಸಿಪಿಎಂ ಸೂಕ್ತ ಆಯ್ಕೆಯಾಗಿದೆ ಎಂದವರು ಹೇಳಿದ್ದಾರೆ.
     ಕರಾವಳಿಯಲ್ಲಿ ಸಿಪಿಎಂ ಕಟ್ಟಡ ಕಾರ್ಮಿಕರ ಸಂಘಟನೆ ಕಟ್ಟಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೇಲ್ವಿಚಾರಣೆ ನಡೆಸಿದೆ. ನಿವೇಶನ ರಹಿತರನ್ನು ಸಂಘಟಸಿ ಅವರಿಂದ ಅರ್ಜಿಗಳನ್ನು ಸಲ್ಲಿಸಿದೆ. ರೇಶನ್ ಕಾರ್ಡು ಗೊಂದಲದ ವಿರುದ್ಧ ಹೋರಾಟ ನಡೆಸಿದೆ. ಇಲ್ಲಿ ಹಂಚು ಕಾರ್ಮಿಕರ ಸಂಘಟನೆ ಕ್ರಿಯಾಶೀಲವಾಗಿದೆ. ಅಂಗನವಾಡಿ ಮತ್ತು ಬಿಸಿಯೂಟದ ಸಿಬ್ಬಂದಿಯ, ಮೀನುಗಾರರ ಸಂಘಟನೆ ಆರಂಭಿಸಲಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಜನತರಲ್ಲಿ ಸಿಪಿಎಂ ಬಗ್ಗೆ ಅಶಾವಾದ ಮೂಡಿದೆ. ಆದ್ದರಿಂದ ಬೈಂದೂರಿನ ಸಿಪಿಎಂ ಅಭ್ಯರ್ಥಿ ಕೆ. ಶಂಕರ್ ಅವರನ್ನು ಮತದಾರರು ಆಯ್ಕೆ ಮಾಡಲಿದ್ದಾರೆ ಎಂದವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿ ಕೆ. ಶಂಕರ್ ಮತ್ತು ಪಕ್ಷದ ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಹೊಂದಾಣಿಕೆ, ಬೆಂಬಲ
    ಸಿಪಿಎಂ ರಾಜ್ಯ ಮಟ್ಟದಲ್ಲಿ ಸಿಪಿಐ, ಫಾರ್ವರ್ಡ್ ಬ್ಲಾಕ್, ಲೋಕಸತ್ತಾ, ಸರ್ವೋದಯ ಕರ್ನಾಟಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ತಾನು ಸ್ಪರ್ಧಿಸದ ಕಡೆಗಳಲ್ಲಿ ಈ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದು, ಅವರ ಪರವಾಗಿ ಮತಯಾಚಿಸುತ್ತದೆ ಎಂದು ನಿತ್ಯಾನಂದ ಸ್ವಾಮಿ ಹೇಳಿದರು.
ಆದರೆ ಹಿಂದಿನ ವರ್ಷಗಳಂತೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ, ಆದರೆ ಉಡುಪಿ ಜಿಲ್ಲೆಯಲ್ಲಿ ಸಿಪಿಎಂ ಬೈಂದೂರಿನಲ್ಲಿ ಮಾತ್ರ ಸ್ಪರ್ಧಿಸುತ್ತಿದ್ದು, ಇತರ 4 ಕ್ಷೇತ್ರಗಳಲ್ಲಿ ಹೊಂದಾಣಿಕೆ ಮಾಡಿಕೊಂಡಿರುವ ಪಕ್ಷಗಳ ಅಭ್ಯರ್ಥಿಗಳೂ ಇಲ್ಲದಿರುವುದರಿಂದ ಅನಿವಾರ್ಯವಾಗಿ ಜೆಡಿಎಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡುತ್ತಿದೆ ಎಂದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com