ಶಿರೂರು: ಇಲ್ಲಿನ ಪ್ರತಿಷ್ಠಿತ ಗ್ರೀನ್ವ್ಯಾಲಿ ನ್ಯಾಶನಲ್ ಸ್ಕೂಲ್ ಹಾಗೂ ಕಾಲೇಜು ಐಸಿಎಸ್ಇ 10ನೇ ತರಗತಿಯ ಪರೀಕ್ಷಾ ಫಲಿತಾಂಶದಲ್ಲಿ ಸತತ 6ನೆ ಬಾರಿ 100 ಶೇ. ಫಲಿತಾಂಶ ದಾಖಲಿಸಿದೆ.
ಗ್ರೀನ್ವ್ಯಾಲಿಯ 9 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರೆ, ಒಟ್ಟು ವಿದ್ಯಾರ್ಥಿಗಳ ಪೈಕಿ 85 ಶೇ. ವಿದ್ಯಾರ್ಥಿಗಳು ಪ್ರಥಮ ದರ್ಜೆ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಸಲ್ಮಾನ್ ಅಹ್ಮದ್ ಜುಬಾಪು ಶೇ. 91.2 ಅಂಕಗಳೊಂದಿಗೆ ಮೊದಲ ಸ್ಥಾನಿಯಾಗಿದ್ದು, ಘನಶ್ಯಾಮ್ ಜಿ. ದೇವಾಡಿಗ, ಸುಹಾ ಹಾಗೂ ಐಶ್ವರ್ಯಾ ಟಿ. ದೇವಾಡಿಗ 88 ಶೇ. ಅಂಕಗಳನ್ನು ಪಡೆದಿದ್ದಾರೆ.
ಕುಂದಾಪ್ರ ಡಾಟ್ ಕಾಂ - editor@kundapra.com