ಮೇ 26 ರಿಂದ ಗಂಗೊಳ್ಳಿ ಮಲ್ಯರಮಠದಲ್ಲಿ ಸಹಸ್ರ ಕುಂಭಾಭಿಷೇಕಕುಂದಾಪುರ: ಪುರಾಣ ಪ್ರಸಿದ್ಧ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀದೇವರಿಗೆ ಮೇ.26ರಂದು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ಅಮೃತ ಹಸ್ತಗಳಿಂದ ನವಗ್ರಹ ವಾಸ್ತುಪೂರ್ವಕ ಸಹಸ್ರ ಕುಂಭಾಭಿಷೇಕ ಕಾರ್ಯಕ್ರಮ ನಡೆಯಲಿದೆ.
       ಮೇ.23ರಿಂದ ಸಹಸ್ರ ಕುಂಭಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಿಧಿ ವಿಧಾನಗಳು ಆರಂಭಗೊಳ್ಳಲಿದ್ದು ಮೇ.29ರವೆರೆಗೆ ನಡೆಯಲಿದೆ. ಮೇ.23ರಂದು ಶ್ರೀ ವೆಂಕಟರಮಣ ದೇವರಿಗೆ ಅಷ್ಟಗಂಧ ಲೇಪನ, ಉಭಯ ದೇವರಿಗೆ ಮಹಾಪೂಜೆ, ಗುರುಭಿಕ್ಷೆ, ರಾತ್ರಿ ಶ್ರೀದೇವರಿಗೆ ಉತ್ಸವ, ವಸಂತಪೂಜೆ.
    ಮೇ.24ರಂದು ರಕ್ಷಾತ್ರಯ ಹವನ, ಉಭಯ ದೇವರಿಗೆ ಮಹಾಪೂಜೆ, ಗುರುಭಿಕ್ಷೆ, ರಾತ್ರಿ ಶ್ರೀದೇವರಿಗೆ ಉತ್ಸವ, ವಸಂತಪೂಜೆ. 
     ಮೇ.26ರಂದು ಬೆಳಿಗ್ಗೆ 5 ಗಂಟೆಗೆ ಮಹಾಪ್ರಾರ್ಥನೆ, 9 ಗಂಟೆಗೆ ಶ್ರೀದೇವರಿಗೆ ಪಂಚಾಮೃತಾಭಿಷೇಕ, 9.30ಕ್ಕೆ ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶರ ಅಮೃತ ಹಸ್ತಗಳಿಂದ ಸಹಸ್ರ ಕುಂಭಾಭಿಷೇಕ, ಶ್ರೀದೇವರಿಗೆ ಪ್ರಸನ್ನ ಪೂಜೆ, ಪೂರ್ಣಾಹುತಿ, ಉಭಯ ದೇವರಿಗೆ ಮಹಾಪೂಜೆ, ಮಹಾಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಗೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಅನುಗ್ರಹ ಆಶೀರ್ವಚನ ನೀಡಲಿದ್ದಾರೆ. ರಾತ್ರಿ ಶ್ರೀದೇವರ ಉತ್ಸವ ಸೇವೆ, ಪೇಟೆ ಸವಾರಿ, ವಸಂತ ಪೂಜೆ ನಡೆಯಲಿದೆ.
    ಮೇ.27ರಂದು ಶ್ರೀದೇವರಿಗೆ ಲಕ್ಷ ಪುಷ್ಪಾರ್ಚನೆ ಹಾಗೂ ಕುಂಕುಮಾರ್ಚನೆ, ಸಂಜೆ ಶ್ರೀದೇವರ ಸನ್ನಿಧಿಯಲ್ಲಿ ಅಷ್ಟೋತ್ತರಶತ ರಂಗಪೂಜಾ ಸೇವೆ ಬಳಿಕ ಹರಿಓಂ ಗಂಗೊಳ್ಳಿ ಇವರ ವತಿಯಿಂದ ಹಾಸ್ಯಮಯ ಕೊಂಕಣಿ ನಾಟಕ ತೀಕ ಪಾಯ್ಸು ಪ್ರದರ್ಶನಗೊಳ್ಳಿದೆ.
       ಮೇ.28ರಂದು ಉಭಯ ದೇವರಿಗೆ ಮಹಾಪೂಜೆ, ಗುರುಭಿಕ್ಷೆ, ಸಂಜೆ 6 ಗಂಟೆಗೆ ಯು.ಪದ್ಮನಾಭ ಪೈ ಇವರಿಂದ ಭಜನಾ ಕಾರ್ಯಕ್ರಮ ರಾತ್ರಿ ಎ.ಜಿ.ಕಾಮತ್ ಮುಂಬೈ ಮತ್ತು ಬಳಗದವರಿಂದ ಕೊಂಕಣಿ ನಾಟಕ ಲಗ್ನಾ ಪಿಶ್ಚೆ ನಡೆಯಲಿದೆ.
       ಸಹಸ್ರ ಕುಂಭಾಭಿಷೇಕ ಸಮಯದಲ್ಲಿ ಸೇವೆಗಳನ್ನು ಮಾಡಲಿಚ್ಛಿಸುವವರು ಯಾ ನಗದು ರೂಪದಲ್ಲಿ ದೇಣಿಗೆ ನೀಡಲಿಚ್ಛಿಸುವ ಸಮಾಜ ಬಾಂಧವರು ದೇವಾಲಯದ ಕಾರ್ಯದಲ್ಲಿ ಪಾವತಿಸಬಹದು ಅಥವಾ ಮೊಬಲಗನ್ನು ಸಿಂಡಿಕೇಟ್ ಬ್ಯಾಂಕ್ ಗಂಗೊಳ್ಳಿ ಶಾಖೆಯ ಉಳಿತಾಯ ಖಾತೆ ಸಂಖ್ಯೆ 01232200066608 ಗೆ ಜಮಾ ಮಾಡಬಹುದು ಎಂದು ಸಹಸ್ರ ಕುಂಭಾಭಿಷೇಕ ಸಮಿತಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com