ಶ್ರೀವೀರಬಾಲ ಸಂಘದ ಸುವರ್ಣ ಸಂಚಿಕೆ ಬಿಡುಗಡೆ


ಕುಂದಾಪುರ: ಇಲ್ಲಿನ ಶ್ರೀ ವೀರಬಾಲ ಸಂಘ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಏರ್ಪಡಿಸಿದ 50ನೇ ಶ್ರೀ ಶಾರದಾ ಮಹೋತ್ಸವದ ನೆನಪಿಗಾಗಿ ಪ್ರಕಟಿಸಿದ 'ಸುವರ್ಣ ಸಂಚಿಕೆ'ಯನ್ನು ಶ್ರೀ ಕಾಶೀಮಠಾಧೀಶ ಶ್ರೀಮತ್‌ ಸುಧೀಂದ್ರ ತೀರ್ಥ ಸ್ವಾಮೀಜಿ ಮಂಗಳೂರಿನಲ್ಲಿ ಬಿಡುಗಡೆ ಮಾಡಿದರು.
     ಸುವರ್ಣ ಸಂಭ್ರಮ ಸಮಿತಿ ಕಾರ್ಯಧ್ಯಕ್ಷ ಶ್ರೀನಿವಾಸ ಅನಂತ ಪ್ರಭು, ವೀರಬಾಲ ಸಂಘದ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಕಿಣಿ, ಉಪಾಧ್ಯಕ್ಷ ಪಿ. ರಾಘವೇಂದ್ರ ಪೈ, ಕೋಶಾಧಿಕಾರಿ ಎಸ್‌. ಗೋಪಾಲಕೃಷ್ಣ ಪೈ, ಜೊತೆ ಕಾರ್ಯದರ್ಶಿ ಅರವಿಂದ ಭಟ್‌, ಕೆ. ಕಿರಣ್‌ ಕಿಣಿ, ವಾಸುದೇವ ಶೆಣೈ ಮೊದಲಾದವರು ಉಪಸ್ಥಿತರಿದ್ದರು.
    ಸಂಸ್ಥಾನ ಶ್ರೀ ಕಾಶೀಮಠಾಧೀಶ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಅವರು ಸುವರ್ಣ ಮಹೋತ್ಸವ ಕಾರ್ಯಕ್ರಮಗಳು ಹಾಗೂ ಸುವರ್ಣ ಸಂಚಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವಚನ ನೀಡಿದರು.
      ವೀರಬಾಲ ಸಂಘದ ವತಿಯಿಂದ ಕುಂದಾಪುರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 50ನೇ ಶ್ರೀ ಶಾರದಾ ಪೂಜಾ ಮಹೋತ್ಸವ ಒಂಭತ್ತು ದಿನಗಳ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನೆರವೇರಿತ್ತು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com