ಶಂಕರ ಜಯಂತಿ ಆಚರಣೆ- ಧಾರ್ಮಿಕ ಸಭೆ


ಮರವಂತೆ: ಧಾರ್ಮಿಕ ಆಚರಣೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ದೇಶದ ನಾಲ್ಕೂ ದಿಕ್ಕುಗಳಲ್ಲಿ ಆಮ್ನಾಯ ಪೀಠಗಳನ್ನು ಸ್ಥಾಪಿಸಿ, ಯೋಗ್ಯ ವ್ಯಕ್ತಿಗಳನ್ನು ನಿಯುಕ್ತಗೊಳಿಸುವ ಮೂಲಕ ಆಧ್ಯಾತ್ಮಿಕ ವಿಚಾರ ಮತ್ತು ಲೌಕಿಕ ವಿಚಾರಗಳ ನಿರ್ವಹಣೆಗಾಗಿ ಅದ್ಭುತವಾದ ಆಡಳಿತತ್ಮಾಕ ವ್ಯವಸ್ಥೆಯನ್ನು ರೂಪಿಸಿ, ಕಟ್ಟುಪಾಡುಗಳಿಗೆ ಒಳಪಡಿಸಿದ್ದು ಆದಿಶಂಕರಾರ್ಚಾರ ಬಹಮುಖೀ ಪ್ರತಿಭೆಗೆ ನಿದರ್ಶನ ಎಂದು ಕುಂದಾಪುರ ತಾಲೂಕು ಹವ್ಯಕ ಸಭಾದ ಅಧ್ಯಕ್ಷ ಜಗದೀಶ ಅವಭೃತ ನುಡಿದರು.
   ಅವರು ಮರವಂತೆ ಜಕ್ಕನಕಟ್ಟೆ ಶ್ರೀ ಯಕ್ಷಿ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನಂ ವತಿಯಿಂದ ಶಂಕರ ಜಯಂತಿ ಆಚರಣೆಯ ಕುರಿತು ಹಮ್ಮಿಕೊಂಡ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
    ಆದಿ ಶಂಕರಾಚಾರ್ಯರು ಸ್ಥಾಪಿಸಿದ ಆಮ್ನಾಯ ಪೀಠವ್ಯವಸ್ಥೆ, ದಶನಾಮಿ ಸನ್ಯಾಸ ವ್ಯವಸ್ಥೆ ಮತ್ತು ಪಂಚಾಯತನ ಪೂಜಾ ವ್ಯವಸ್ಥೆಯ ವ್ಯಾವಹಾರಿಕ ಕೌಶಲ್ಯದ ಕುರಿತು ಉಪನ್ಯಾಸ ನೀಡಿದ ಸಾಹಿತಿ, ಧಾರ್ಮಿಕ ಮುಖಂಡ ಉಪ್ಪುಂದ ಚಂದ್ರಶೇಖರ ಹೊಳ್ಳ. ಶಂಕರ ತತ್ವ ಸಮಿತಿಯ ವತಿಯಿಂದ ಸುಲಭಗ್ರಂಥಗಳ ಪ್ರಕಟಣೆ ಮತ್ತು ವಿತರಣೆ ಶಂಕರಾಚಾರ್‍ಯರು ರಚಿಸಿದ ಸರಳ ಸುಂದರ ದೇವತಾ ಸ್ತೋತ್ರಗಳ ಸುಶ್ರಾವ್ಯ ಹಾಡುವಿಕೆಗೆ ಶಿಬಿರ ನಡೆಸುವ ಯೋಜನೆಯ ಕುರಿತು ಮುಂದಿನ ದಿನಗಳಲ್ಲಿ ಶ್ರಮಿಸುವುದಾಗಿ ತಿಳಿಸಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮಧರ್ಶಿ ಮುಂಜುನಾಥ ಭಟ್ ಶುಭಾಸಂಶನೆಗೈದರು. 
      ವೇ. ಮೂ. ತಿಮ್ಮಣ್ಣ ಭಟ್ ಪ್ರಾರ್ಥಿಸಿದರು, ಸುಬ್ರಹ್ಮಣ್ಯ ಅವಭೃತ ಸ್ವಾಗತಿಸಿ, ಶಂಕರ ಪ್ರಸಾರ ಸಮಿತಿಯ ಖಜಾಂಚಿ ಯು. ಗಣೇಶ ಪ್ರಸನ್ನ ಮಯ್ಯ ನಿರೂಪಿಸಿ ವಂದಿಸಿದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com