ಕೋಟ: ಕನ್ನಡ ನಮ್ಮ ಮಾತೃಭಾಷೆಯಾಗಿದ್ದು ಇಂದಿಗೂ ಶ್ರೇಷ್ಠ ಭಾಷೆಯಾಗಿ ಉಳಿದಿದೆ. ಕನ್ನಡ ಸಾಹಿತ್ಯ ಪರಿಷತ್ತ್ ಕನ್ನಡದ ನೆಲ,ಜಲ, ಸಂಸ್ಕøತಿಯನ್ನು ರಕ್ಷಿಸುವ ಕಾರ್ಯ ಮಾಡುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಹೇಳಿದರು.
ಅವರು ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆ ಸ್ವರ್ಣಭವನದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಉಡುಪಿ ತಾಲುಕು ಘಟಕದ ಆಶ್ರಯದಲ್ಲಿ ಕೋಟ ಮಿತ್ರ ಮಂಡಳಿ ಮತ್ತು ಕೋಟ ವಿದ್ಯಾ ಸಂಘ ಇವರ ಸಹಕಾರದೊಂದಿಗೆ ಕಸಾಪ ಸಂಸ್ಥಾಪನ ದಿನಾಚರಣೆÀ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬ್ಯಾರಿ, ತುಳು ಸಾಹಿತ್ಯ ಅಕಾಡೆಮಿಗಳು ಇಂದು ರಾಜಕೀಯದಿಂದ ಮುಳುಗಿದ್ದು, ಅಲ್ಲಿ ಬಂದ ಅನುದಾನಗಳನ್ನು ಖರ್ಚು ಮಾಡುವುದಕ್ಕಷ್ಟೆ ಕಾರ್ಯಕ್ರಮಗಳು ಜರುಗುತ್ತಿವೆ. ಆದರೆ ಕನ್ನಡ ಸಾಹಿತ್ಯ ಪರಿಷತ್ ಒಂದಷ್ಟು ಸಾಹಿತ್ಯದ ಪರ ಕೆಲಸ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು.
ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಡಾ. ಟಿ.ಎಂ.ಎ.ಪೈ ಶಿಕ್ಷಣ ಮಹಾ ವಿದ್ಯಾಲಯದ ಪ್ರಿನ್ಸಿಪಾಲ್ ಡಾ. ಮಹಾಬಲೇಶ್ವರ ರಾವ್, ಕುಂದಾಪುರ ಕಸಾಪ ಅಧ್ಯಕ್ಷ ಕುಂ.ನಾರಾಯಣ ಖಾರ್ವಿ ಆಗಮಿಸಿ ಶುಭ ಹಾರೈಸಿದರು. ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಎಚ್.ಶ್ರೀಧರ ಹಂದೆ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಬಹುಮುಖ ಪ್ರತಿಭೆಯ ದಿ.ಶ್ರೀನಿವಾಸ ಉಡುಪರ ಸಂಸ್ಮರಣೆಗೈದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕೋಟ ವಿವೇಕ ಬಾಲಕೀಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಕು. ಮಹಿಮಾ ಅವರನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಆಕಾಶವಾಣಿ ಕಲಾವಿದ ಚಂದ್ರಶೇಖರ ಕೆದಿಲಾಯ, ಶಿಕ್ಷಕಿ ಗೀತಾ ತುಂಗ ಇವರಿಂದ ಗಾಯನ, ಕುಮರಿ ಅಮೃತ ಉಪಾಧ್ಯ ಮತ್ತು ತಂಡ, ಕು.ಲಾಸ್ಯ ಎಸ್.ಅಡಿಗ, ಮಾಲಿನಿ ರಮೇಶ್ ನಿರ್ದೇಶನದ ನರ್ತನ ಕಾರ್ಯಕ್ರಮ ಜರುಗಿತು. ಕೋಟ ಬಾಲಕೀಯರ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಶ್ರೀಪತಿ ಹೇರ್ಳೆ ಸ್ವಾಗತಿಸಿದರು, ನರಸಿಂಹ ಐತಾಳ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಕೋಟ ವಿದ್ಯಾ ಸಂಘದ ಕೋಶಾಧಿಕಾರಿ ವಿಲೇರಿಯಾ ಮಿನೇಜಸ್, ಎಎಸ್ಎನ್ ಹೆಬ್ಬಾರ್, ರಂಗಪ್ಪಯ್ಯ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com