ಕುಂದಾಪುರ: ಭಾರತ್ ಸ್ವಾಭಿಮಾನ್ ಟ್ರಸ್ಟ್, ಪತಂಜಲಿ ಯೋಗ ಪೀಠ ಉಡುಪಿ- ಕುಂದಾಪುರ, ಚೇತನಾ ಕಲಾರಂಗ, ರೋಟರಿ ಕ್ಲಬ್ ಕೋಟೇಶ್ವರ ಸಂಯುಕ್ತ ಆಶ್ರಯದಲ್ಲಿ ಮೇ 29ರಿಂದ ಜೂ.2ರತನಕ ಪ್ರತಿದಿನ ಬೆಳಗ್ಗೆ 5.30ರಿಂದ 7ರತನಕ ಕೋಟೇಶ್ವರ ಸರ್ಕಾರಿ ಮಾದರಿ ಹಿ.ಪ್ರಾಥಮಿಕ ಶಾಲೆಯ ಮಹಾಲಕ್ಷ್ಮೀ ಮಧ್ವರಾಯ ಸಭಾಭವನದಲ್ಲಿ ಪ್ರಾಣಾಯಾಮ, ಧ್ಯಾನ ಮತ್ತು ರೋಗಕ್ಕೆ ಆಯುರ್ವೇದ ಸಲಹೆಯೊಂದಿಗೆ ಉಚಿತ ಯೋಗ ಶಿಬಿರ ನಡೆಯಲಿದೆ. ಆಸಕ್ತರು ಶಿಬಿರಕ್ಕೆ ಬರುವಾಗ ಬೆಡ್ ಶೀಟ್, ಕರವಸ್ತ್ರವನ್ನು ತಾವೇ ತರಬೇಕು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ಪ್ರಕಾಶ್ ಉಪಾಧ್ಯಾಯ(9449865301) ಅವರನ್ನು ಸಂಪರ್ಕಿಸಬಹುದು.
ಕುಂದಾಪ್ರ ಡಾಟ್ ಕಾಂ - editor@kundapra.com