ಉಪ್ಪುಂದ: ಕಾಲಚಕ್ರ ಮತ್ತು ಋತುಮಾನಗಳು ಸೃಷ್ಠಿಯ ನಿಗೂಢ ಶಕ್ತಿಯನ್ನು ಸಶಕ್ತವಾಗಿ ಹೊರಹೊಮ್ಮಿಸುತ್ತವೆ. ವಸಂತಮಾಸ ಹೊಸ ಉತ್ಸಾಹ ಚೈತನ್ಯವನ್ನು ಹೊರಹೊಮ್ಮುತ್ತವೆ. ಸಾಹಿತ್ಯ ಸಂಗೀತ ಕಲೆಗಳ ವಿಕಸನಕ್ಕೆ ಈ ಸಮಯ ಅನೂಕೂವಾಗಿದೆ ಎಂದು ಬೆಂಗಳೂರಿನ ಭಾರತೀಯ ವಿದ್ಯಾಭವನದ ಮಾಧ್ಯಮ ನಿರ್ದೇಶಕ ಎಂ. ಜಯರಾಮ ಅಡಿಗ ಹೇಳಿದರು.
ಅವರು ಇಲ್ಲಿನ ಶಂಕರ ಕಲಾಮಂದಿರದಲ್ಲಿ ಕುಂದ ಅಧ್ಯಯನ ಕೇಂದ್ರದಲ್ಲಿ ಸಾಹಿತ್ಯ ವಸಂತೋತ್ಸವನ್ನು ಉದ್ಘಾಟಿಸಿ ಮಾತನಾಡಿದರು.
ಎಸ್.ವಿ. ವೆಂಕಟೇಶ ಮತ್ತು ಎಸ್.ವಿ. ಮಂಜುಳಾ ರಚಿಸಿದ ಕನ್ನಡ ಚುಟುಕು ಕವನದ ಚುಟುಕು ರಾಮಾಯಣವನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಬಿಡುಗಡೆಗೊಳಿಸಿದರೆ, ಯುವ ಕವಯಿತ್ರಿ ಸುಮನಾ ಗಾಣಿಗ ರಚಿಸಿದ ಕವನ ಸಂಕಲನವನ್ನು ಸಾಹಿತಿ ಯು. ವರಮಹಾಲಕ್ಷ್ಮೀ ಹೊಳ್ಳ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದ ಅಧ್ಯಯನ ಕೇಂದ್ರದ ನಿರ್ದೇಶಕ ಉಪ್ಪುಂದ ಚಂದ್ರಶೇಖರ ಹೊಳ್ಳ ವಹಿಸಿದ್ದರು.
ಸುರಭಿ ಕಲಾ ಸಂಸ್ಥೆಯ ನಿರ್ದೇಶಕ ಪಿ. ಸುಧಾಕರ ಬೈಂದೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೃತಿ ರಚನಾಕರರನ್ನು ಸನ್ಮಾನಿಸಲಾಯಿತು. ಸುರಭಿ ಕಲಾಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಅರೆಹಾಡಿ ಸಂಗೀತ ಪ್ರಶಿಕ್ಷುಗಳಿಂದ ವಸಂತ ಸಂಗೀತ ನಡೆಯಿತು.
ಕು. ಅಭಯ್ ಮತ್ತು ತಂಡದವರು ಪ್ರಾರ್ಥಿಸಿದರು ತಾಲೂಕು ಕ.ಸಾ.ಪ. ಕಾರ್ಯದರ್ಶಿ ಯು. ಸಂದೇಶ ಭಟ್ ಸ್ವಾಗತಿಸಿ, ತಾಲೂಕು ಕ.ಸಾ.ಪ. ದ ಖಜಾಂಚಿ ಯು. ಗಣೇಶಪ್ರಸನ್ನ ಮಯ್ಯ ನಿರೂಪಿಸಿ, ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com