ಬೈಂದೂರು: ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಗೋಯಾಡಿಮನೆಯ ನಿವಾಸಿ ನಾರಾಯಣ ಖಾರ್ವಿ ಎಂಬುವವರ ಮಗ ಸುಮಾರು 12 ವರ್ಷ ಪ್ರಾಯದ ಭರತ್ ಅನ್ನನಾಳದ ಕ್ಯಾನ್ಸರ್ನಿಂದ ಬಳಲುತ್ತಿದ್ದಾನೆ. ಅನ್ನನಾಳದಲ್ಲಿ ಕ್ಯಾನ್ಸರ್ ಗಡ್ಡೆ ಶೇಕಡ 90ರಷ್ಟು ಆವರಿಸಿಕೊಂಡಿದ್ದು, ತಂದೆ ತಾಯಿಗಳ ಒಬ್ಬನೇ ಪುತ್ರನಾಗಿರುವ ಈತನಿಗೆ ಶಸ್ತ್ರಚಿಕಿತ್ಸೆಯ ತುರ್ತು ಅಗತ್ಯವಿದ್ದು ಅದರ ಖರ್ಚು ಸುಮಾರು 8-10 ಲಕ್ಷ ರೂಪಾಯಿ ತಗಲಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಬಡ ಮೀನುಗಾರರಾದ ಹೆತ್ತವರಿಗೆ ಈತನ ಚಿಕಿತ್ಸೆಯ ಖರ್ಚನ್ನು ಭರಿಸುವುದು ಕಷ್ಟಸಾಧ್ಯವಾಗಿದೆ. ಹಾಗಾಗಿ ಮಗನ ಉಳಿವಿಗಾಗಿ ದಂಪತಿಗಳು ದಾನಿಗಳ ಮೊರೆ ಹೋಗಿದ್ದು, ಆರ್ಥಿಕವಾಗಿ ಹಿಂದುಳಿದ ಈ
ಬಡ ಕುಟುಂಬಕ್ಕೆ ಸಹಾಯ ಮಾಡುವ ದಾನಿಗಳು ನಾಣು ಯಾನೆ ನಾರಾಯಣ ಖಾರ್ವಿ ಬಿನ್ ಶೇಷ ಖಾರ್ವಿ, ಗೋಯಾಡಿಮನೆ, ಕೊಡೇರಿ, ಕಿರಿಮಂಜೇಶ್ವರ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ - 576219 ಈ ವಿಳಾಸಕ್ಕೆ ಸಂಪರ್ಕಿಸಬಹುದು ಅಥವಾ ಕರ್ನಾಟಕ ಬ್ಯಾಂಕ್ ಕಿರಿಮಂಜೇಶ್ವರ (ನಾಗೂರು) ಉಳಿತಾಯ ಖಾತೆ ಸಂಖ್ಯೆ 4222500101116201 ಇಲ್ಲಿಗೆ ಕಳುಹಿಸಬಹುದು.
ಕುಂದಾಪ್ರ ಡಾಟ್ ಕಾಂ - editor@kundapra.com