ಸುರಭಿ ಚಿಟ್ಲಪಟ್ಲಕಾಯಿ ಬೇಸಿಗೆ ಶಿಬಿರ ಸಮಾರೋಪ


 ಬೈಂದೂರು: ಇಲ್ಲಿನ ಸುರಭಿ ಕಲಾಸಂಸ್ಥೆಯ ಆಶ್ರಯದಲ್ಲಿ ಭಾರತೀಯ ಯುನೆಸ್ಕೋ ಕ್ಲಬ್ ಹಾಗೂ ಸಂಚಲನ ( ರಿ ) ಹೊಸೂರು ಇದರ ಸಹಯೋಗದೊಂದಿಗೆ ನಡೆದ ಗ್ರಾಮೀಣ ಮಕ್ಕಳ 8 ದಿನಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಬೈಂದೂರಿನ ಪ. ವರ್ಗ ಆಶ್ರಯ ಶಾಲೆಯಲ್ಲಿ ನಡೆಯಿತು.
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ವಹಿಸಿದ್ದರು.
   ಮುಖ್ಯ ಅತಿಥಿಯಾಗಿ ಜಾದೂಗಾರ, ನಟ ಓಂ ಗಣೇಶ್, ಬೈಂದೂರಿನ ಸೌಖ್ಯ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ರಿಯಾಜ್ ಅಹಮ್ಮದ್ ಹಾಗೂ ವೈದ್ಯರಾದ ದೀಪಕ್ ಕುಮಾರ್ ಕೆ. ಜಿ., ಯೋಗ ಶಿಕ್ಷಕ ಸಿ. ಆರ್. ಪಿ. ಸಂಪನ್ಮೂಲ ವ್ಯಕ್ತಿ ಶ್ರೀ ನಾಗರಾಜ್ ಬೆಳ್ಕೆ ಉಪಸ್ಥಿತರಿದ್ದರು.
  ಶಿಬಿರಾರ್ಥಿ ಅನ್ನಪೂರ್ಣ ಸ್ವಾಗತಿಸಿ, ಗಣಪತಿ ಹೋಬಳಿದಾರ್ ಪ್ರಾಸ್ತಾವಿಕ ಮಾತನಾಡಿ, ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು. 
100 ಕ್ಕೂ ವಿಕ್ಕಿ ಮಕ್ಕಳು ಶಿಬಿರದಲ್ಲಿ ಪಾಲ್ಗೋಂಡಿದ್ದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com