ನಕ್ಸಲ್ ಸಕ್ರಿಯ ಪ್ರದೇಶಗಳಲ್ಲಿ ಬೀಗಿ ಭದ್ರತೆ


ಉಡುಪಿ: ನಕ್ಸಲರ ಯಾವುದೇ ದಾಳಿ, ಬೆದರಿಕೆಯ ಆತಂಕವಿಲ್ಲದೆ ನಕ್ಸಲ್ ಸಕ್ರಿಯ ಮತಗಟ್ಟೆಗಳ ವ್ಯಾಪ್ತಿಯ ಮತದಾರರು ತಮ್ಮ ಹಕ್ಕು ಚಲಾಯಿಸಬಹುದು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ. ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ, ಬೈಂದೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 26 ಗ್ರಾಮಗಳ 52 ಬೂತ್‌ಗಳು ನಕ್ಸಲ್ ಸಕ್ರಿಯವಾಗಿವೆ. 
  ನಕ್ಸಲ್ ಸಕ್ರಿಯ ಸೂಕ್ಷ್ಮ ಮತಗಟ್ಟೆಗಳಲ್ಲಿ ಅರೆ ಸೇನಾ ಪಡೆಯ 8 ಮಂದಿಯ ತಂಡವನ್ನು ನಿಯೋಜಿಸ ಲಾಗಿದೆ. ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ 9-10 ಮಂದಿ ಸೆಕ್ಷನ್ ಹಾಗೂ 4-5 ಮಂದಿ ಹಾಫ್ ಸೆಕ್ಷನ್ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 
     2008ರಲ್ಲಿ 49 ಬೂತ್‌ಗಳು ನಕ್ಸಲ್ ಸಕ್ರಿಯವಾಗಿದ್ದವು. 2008ರ ಮೇ 16ರಂದು ನಡೆದ ವಿಧಾನಸಭೆ ಚುನಾವಣೆಯ ಮುನ್ನಾ ದಿನದಂದು ನಾಡ್ಪಾಲಿನ ಭೋಜ ಶೆಟ್ಟಿ ಹಾಗೂ ಸುರೇಶ್ ಶೆಟ್ಟಿ ಹತ್ಯೆ ಶಂಕಿತ ನಕ್ಸಲರಿಂದ ನಡೆದಿದ್ದು, ಬಳಿಕ ತನಿಖೆಯನ್ನು ಸಿಒಡಿಗೆ ವಹಿಸಲಾಗಿತ್ತು. ಆದರೆ ಚುನಾವಣೆಗೂ, ದುರ್ಘಟ ನೆಗೂ ಸಂಬಂಧವಿಲ್ಲ ಎನ್ನುತ್ತಿದೆ ಪೊಲೀಸ್ ಇಲಾಖೆ. 
      2008ರ ಬಳಿಕ ನಕ್ಸಲ್ ಸಮಸ್ಯೆ ಜಿಲ್ಲೆಯಲ್ಲಿ ಕಡಿಮೆಯಾಗಿದ್ದು, 2009ರ ಲೋಕಸಭೆ ಚುನಾವಣೆ, 2010 ರಲ್ಲಿ ಗ್ರಾ.ಪಂ., ತಾ.ಪಂ., ಜಿ.ಪಂ. ಚುನಾವಣೆ, 2012ರಲ್ಲಿ ನಡೆದ ಉಡುಪಿ-ಚಿಕ್ಕಮಗಳೂರು ಲೋಕಸಭೆ ಮರು ಚುನಾವಣೆಗೆ ನಕ್ಸಲರಿಂದ ಯಾವುದೇ ಅಡ್ಡಿ ಆತಂಕ ಎದುರಾಗಿಲ್ಲ. 
   1999, 2004, 2008ರ ವಿಧಾನಸಭೆ ಚುನಾವಣೆಯಲ್ಲಿ ನಕ್ಸಲ್ ಸಕ್ರಿಯ ಮತಗಟ್ಟೆಗಳಲ್ಲಿ ಶೇ. 75-80 ರಷ್ಟು ಮತದಾನವಾಗಿದೆ. ಯಾರಾದರೂ ಮತದಾನ ಮಾಡದಂತೆ ಬೆದರಿಕೆ ಒಡ್ಡಿದರೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಬಹುದು ಎನ್ನುತ್ತಾರೆ ಪೊಲೀಸ್ ?ಕಾರಿಗಳು. 
    ಚುನಾವಣೆ ಹಿನ್ನೆಲೆಯಲ್ಲಿ 4,108 ಬಂದೂಕುಗಳ ಪೈಕಿ 4,088 ಈಗಾಗಲೇ ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಠೇವಣಿಯಾಗಿದೆ. ಜ್ಯುವೆಲ್ಲರಿ ಭದ್ರತೆ ಸಹಿತವಾಗಿ 19 ಬಂದೂಕುಗಳಿಗೆ ವಿನಾಯಿತಿ ನೀಡಲಾಗಿದೆ. ಕೃಷಿಕರ ತೋಟಕ್ಕೆ ಪ್ರಾಣಿ ತೊಂದರೆಯಿದ್ದರೂ ಹೊಂದಾಣಿಕೆ ಮಾಡಿಕೊಳ್ಳಬೇಕು. 

ಭದ್ರತೆಯೊಂದಿಗೆ ಶಾಂತಿಯುತ ಚುನಾವಣೆ.
 ನಿಷ್ಪಕ್ಷಪಾತ ಮತದಾನದ ನಿಟ್ಟಿನಲ್ಲಿ ಪೊಲೀಸ್ ಬಿಗು ಬಂದೋಬಸ್ತ್ ಮಾಡಲಾಗಿದೆ. ನಿರ್ಭೀತಿಯಿಂದ ಎಲ್ಲರೂ ಮತಗಟ್ಟೆಗೆ ಬಂದು ಮತ ಚಲಾಯಿಸಬಹುದು.
 -ಡಾ. ಎಂ. ಬಿ. ಬೋರಲಿಂಗಯ್ಯ, ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ 


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com