ಮೇ.14 ಮತ್ತು 16ರಂದು ಜಿಲ್ಲಾದ್ಯಂತ ವಿದ್ಯುತ್ ವ್ಯತ್ಯಯ


ಕುಂದಾಪುರ: ಕೇಮಾರು ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ 100 ಎಂ.ವಿ.ಎ ಶಕ್ತಿ ಪರಿವರ್ತಕ ಸಂಖ್ಯೆ 2ರಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ 14ರಂದು ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಉಡುಪಿ ಜಿಲ್ಲೆಯಾದ್ಯಂತ ಅನಿಯಮಿತವಾಗಿ ವಿದ್ಯುತ್ ನಿಲುಗಡೆ ಮಾಡಲಾಗುವುದು. 
     ಮಣಿಪಾಲ ಕೆವಿ ವಿದ್ಯುತ್ ಉಪಕೇಂದ್ರದಲ್ಲಿ 14ರಂದು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಂದು ಬೆಳಗ್ಗೆ 9.30ರಿಂದ ಸಂಜೆ 4 ಗಂಟೆವರೆಗೆ ಈ ಕೆಳಗಿನ ಉಪಕೇಂದ್ರಗಳಿಗೆ ಸಂಬಂಧಪಟ್ಟ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯಾಗಲಿದೆ. ಉಪಕೇಂದ್ರಗಳು- 110 ಕೆವಿಎ ಮಣಿಪಾಲ ವಿದ್ಯುತ್ ಉಪಕೇಂದ್ರ, 110 ಕೆವಿಎ ನಿಟ್ಟೂರು ವಿದ್ಯುತ್ ಉಪಕೇಂದ್ರ, 110 ಕೆವಿಎ ಬ್ರಹ್ಮಾವರ ವಿದ್ಯುತ್ ಉಪಕೇಂದ್ರ, 33 ಕೆವಿಎ ಶಿರ್ವ ವಿದ್ಯುತ್ ಉಪಕೇಂದ್ರ, 33 ಕೆವಿಎ ಕುಂಜಿಬೆಟ್ಟು ವಿದ್ಯುತ್ ಉಪಕೇಂದ್ರ. 
       ಹಿರಿಯಡ್ಕ- ಮಧುವನ- ಕುಂದಾಪುರ- ನಾವುಂದ 110 ಕೆ.ವಿ. ಲೈನಿನಲ್ಲಿ 14ರಂದು ದುರಸ್ತಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ ದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 
       ಮಧುವನ ಉಪಕೇಂದ್ರ- ಕೋಟ, ಮಣೂರು, ಸಾಸ್ತಾನ, ಮಂದಾರ್ತಿ, ಕೊಕ್ಕರ್ಣೆ, ಶಿರಿಯಾರ, ಸಾಹೇಬರ ಕಟ್ಟೆ. ಕುಂದಾಪುರ ಉಪಕೇಂದ್ರ-ಕುಂದಾಪುರ, ಬಸ್ರೂರು, ಬಳ್ಳೂರು, ಜಪ್ತಿ, ಕೋಟೇಶ್ವರ, ಕುಂಭಾಶಿ, ತೆಕ್ಕಟ್ಟೆ, ಸಂಗಮ್ ಇಂಡಸ್ಟ್ರಿಯಲ್, ಅಂಪಾರು. ನಾವುಂದ ಉಪಕೇಂದ್ರ- ಬಡಾಕೆರೆ, ಕಂಬದಕೋಣೆ, ಹೇರೂರು, ಆಲೂರು. ಬೈಂದೂರು, ತಲ್ಲೂರು ಉಪಕೇಂದ್ರ- ತಲ್ಲೂರು, ಗಂಗೊಳ್ಳಿ, ವಂಡ್ಸೆ, ಬಾಂಡ್ಯ, ಗುಲ್ವಾಡಿ, ಜಡ್ಕಲ್, ಮರವಂತೆ, ನಾಡಾ, ಬೈಂದೂರು, ಶಿರೂರು, ಉಪ್ಪುಂದ, ನಾವುಂದ, ಕೊಲ್ಲೂರು, ನೇರಳಕಟ್ಟೆ. ಮಧುವನ ವಿದ್ಯುತ್ ಉಪಕೇಂದ್ರದಲ್ಲಿ 16ರಂದು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ ದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಲ್ಲಾ 11 ಕೆ.ವಿ.ಎ ವಿದ್ಯುತ್ ಮಾರ್ಗದಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು. ಸಂಬಂಧಪಟ್ಟ ಗ್ರಾಹಕರು ಇದನ್ನು ಗಮನಿಸಿ ಮೆಸ್ಕಾಂನೊಂದಿಗೆ ಸಹಕರಿಸುವಂತೆ ಕೋರಿದೆ.


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com