ಕುಂದಾಪುರ: ಮಹಾತ್ಮ ಜ್ಯೋತಿಬಾಪುಲೆ ಕೊರಗರ ಯುವ ಕಲಾವೇದಿಕೆ ಬೈಂದೂರು ಆಶ್ರಯದಲ್ಲಿ ನಡೆಯುವ ರಾಜ್ಯ ಮಟ್ಟದ ಕೊರಗರ ಯುವ ಉತ್ಸವದ ಅಂಗವಾಗಿ ಕೊರಗಶ್ರೀ ಪ್ರಶಸ್ತಿ ಪ್ರಕಟಿಸಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಆಯ್ಕೆಯಾಗಿದ್ದಾರೆ. ಸಾಮಾಜಿಕ ಕ್ಷೇತ್ರದ ಧುರೀಣ ಮಂಗಳೂರಿನ ಕೊರಗ ಸಮುದಾಯದ ಹಿರಿಯ ಮುಖಂಡ ಗೋಕುಲದಾಸ್, ಶಿಕ್ಷಣ ಕ್ಷೇತ್ರದ ಸಾಧಕ ಉಡುಪಿ ಎಂಜಿಎಂ ಕಾಲೇಜಿನ ಉಪನ್ಯಾಸಕ ಡಾ. ಬಾಬು ಬೆಳ್ತಂಗಡಿ, ಕೊರಗರ ಕುಲಕ ಸುಬಿನಲ್ಲಿ ನೈಪುಣ್ಯ ಗಳಿಸಿರುವ ಕುಂದಾಪುರ ತಾಲೂಕು ಬಿಜೂರು ಬವಳಾಡಿ ಕುಪ್ಪ ಚೀಕ ಕೊರಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೇ 11ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಯ್ಕೆ ಸಮಿತಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ - editor@kundapra.com