ಪೌರಾಣಿಕ ಯಕ್ಷನೃತ್ಯ ಅಭಿನಯ ಬೇಸಗೆ ಶಿಬಿರ


ಕೋಟ: ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ವತಿಯಿಂದ ಪ್ರತಿವರ್ಷ ನಡೆಯುವ ಪೌರಾಣಿಕ ಯಕ್ಷ ನೃತ್ಯ ಅಭಿನಯ ಎಂಬ 7 ದಿನಗಳ ಬೇಸಗೆ ಶಿಬಿರವು ಇತ್ತೀಚೆಗೆ ಕೋಟ ಹೈಸ್ಕೂಲ್ ಹತ್ತಿದ ಹಂದೆ ದೇವಸ್ಥಾನದಲ್ಲಿ ಆರಂಭವಾಯಿತು. ಶಿಬಿರವನ್ನು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಉಪೇಂದ್ರ ಸೋಮಯಾಜಿ ಉದ್ಘಾಟಿಸಿದರು.
ವಿದ್ಯಾರ್ಥಿಗಳು ರಜೆಯಲ್ಲಿ ವ್ಯರ್ಥ ಕಾಲಹರಣ ಮಾಡದೇ ಇಂಥ ಉಪಯುಕ್ತ ಶಿಬಿರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ರಜೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೇವಲ ಪುಸ್ತಕದ ಹುಳುಗಳಾಗದೆ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಸಮೃದ್ಧ ಪುರಾಣ ಕಥೆಗಳ ತಿಳುವಳಿಕೆಯನ್ನು ಹೊಂದಬೇಕು. ಜತೆಗೆ ತಮ್ಮಲ್ಲಿರುವ ಪ್ರತಿಭೆಗೆ ಸುಂದರ ರೂಪವನ್ನು ಕೊಡಬೇಕು ಎಂದವರು ಕರೆ ನೀಡಿದರು. ಈ ಕಾರ್ಯ ಮಾಡುತ್ತಿರುವ ಯಕ್ಷಾಂಗಣ ಟ್ರಸ್ಟ್, ಕೋಟ ಜೆ.ಸಿ.ಐ., ಕೋಟ ಕಲಾಪೀಠ, ದಾಸಯಕ್ಷಗಾನ ಚಾರಿಟೇಬಲ್ ಟ್ರಸ್ಟ್‌ಗಳನ್ನು ಅವರು ಶ್ಲಾಘಿಸಿದರು.
ಸಮಾರಂಭದ ಮುಖ್ಯ ಅತಿಥಿ ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿರುವ ಕಲಾವಿದ ಎಚ್. ಸುಜಯೀಂದ್ರ ಹಂದೆ, ಹಂದೆ ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮ ಭಟ್, ಜೆಸಿಐ ಅಧ್ಯಕ್ಷ ಕೇಶವ ಆಚಾರ್ಯ, ರಂಗ ಸಂಪದ ಸಂಸ್ಥೆಯ ಕಾರ್ಯದರ್ಶಿ ರಾಘವೇಂದ್ರ ತುಂಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನರಸಿಂಹ ತುಂಗ ನಿರ್ವಹಿಸಿದರು. ಸುದರ್ಶನ ಉರಾಳರು ವಂದಿಸಿದರು. 7 ದಿನದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನರಸಿಂಹ ತುಂಗ, ಸುಜಯೀಂದ್ರ ಹಂದೆ, ಸುದರ್ಶನ ಉರಾಳ, ದೇವರಾಜ ದಾಸ, ಮಾಧವ ಮತ್ತು ಗಣಪತಿ ಹೆಗಡೆ ಕಡ್ಲೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com