ಕುಂದಾಪುರ: ದೇವಾಲಯಗಳು ದೇವರ ಆರಾಧನೆಗೆ ಮಾತ್ರ ಸೀಮಿತವಲ್ಲ, ಅನೌಪಚಾರಿಕ ಶಿಕ್ಷಣ ನೀಡುವ ವಿದ್ಯಾಲಯ, ಕ್ಷಿಪ್ರ ನ್ಯಾಯಧಾನ ನೀಡುವ ನ್ಯಾಯಾಲಯ ಹಾಗೂ ಎಲ್ಲರಿಗೂ ಉತ್ತಮ ಆರೋಗ್ಯ ನೀಡುವ ಔಷಧಾಲಯ ಕೇಂದ್ರವಾಗಿ ನಮಗೆ ಸಂಸ್ಕೃತಿ ನೀಡುತ್ತದೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿಗಳಾದ ಡಾ. ಎಚ್.ವಿ. ನರಸಿಂಹ ಮೂರ್ತಿ ಹೇಳಿದರು.
ಅವರು ಬುಧವಾರ ಕುಂದಾಪುರ ತಾಲೂಕಿನ ಬೇಳೂರು ಕೊಣ ಬಗೆ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ನವೀಕೃತ ಶಿಲಾಮಯ ಗರ್ಭ ಗೃಹ ಲೋಕಾರ್ಪಣೆ, ಬಿಂಬ ಪ್ರತಿಷ್ಠೆ ಮತ್ತು ಬೃಹ್ಮಕ¯ಶಾಭಿಶೇಕದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.
ದೇವಸ್ಥಾನಗಳು ಸನಾತನ ಸಂಸ್ಕೃತಿಯ ಭದ್ರ ಕೋಟೆಯಾಗಿದೆ. ಕ್ಷೇತ್ರದ ಅಭಿವೃದ್ಧಿಯಾಗಬೇಕಾದರೆ ಅರ್ಚಕರು ಶೃದ್ಧಾ, ಭಕ್ತಿಯಿಂದ ದೇವರನ್ನು ಪೂಜಿಸಿದ ಫಲದಿಂದ ಸಾಮಾನ್ಯ ಕಲ್ಲು ದೇವರ ಸಾನಿಧ್ಯ ಪಡೆಯುತ್ತದೆ. ಉತ್ತಮ ಧಾರ್ಮಿಕ ವಾತಾವರಣ ಮೂಡಬೇಕಾದರೆ ಪ್ರತಿನಿತ್ಯ ಭಜನೆ, ಪಠಣ, ವೇದ ಪಾರಾಯಣದಿಂದ ವಿಶಿಷ್ಟ ಶಕ್ತಿ ಶೋಭಿಸುತ್ತದೆ. ಹೀಗೆ ದೇವಾಲಯಗಳಲ್ಲಿ ಆಚಾರ್ಯ,ತಪ,ನಿಯಮ,ಉತ್ಸಹ, ಅನ್ನಧಾನ ಶಾಸ್ತ್ರೋಕ್ತವಾಗಿ ನಡೆಸಿದಾಗ ದೇವತಾ ಸಾನಿಧ್ಯದಿಂದ ವಿಶೇಷ ಕಳೆ ನಿರ್ಮಾಣಗೊಂಡು ಎಲ್ಲರ ಅಭಿವೃದ್ಧಿಯಾಗುತ್ತದೆ ಎಂದರು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿದ್ದರು. ಅವರು ಮಾತನಾಡಿ, ಜೀವನದ ಎಲ್ಲಾ ರೀತಿಯ ಕಾರ್ಯಕ್ರಮಗಳು ದೇವಸ್ಥಾನಗಳಲ್ಲಿ ನಡೆಸಿಕೊಂಡು ಬಂದಿದ್ದರಿಂದ ಪ್ರಪಂಚದಲ್ಲಿ 48 ಸಂಸ್ಕೃತಿ ಗಳು ಪರಕಿಯರ ದಾಳಿಯಿಂದ ವಿನಾಶದ ಅಂಚಿನಲ್ಲಿದ್ದರೂ ನಮ್ಮ ಧಾರ್ಮಿಕ ಸನಾತನ ಸಂಸ್ಕತಿಗೆ ಧಕ್ಕೆಯಾಗದೆ ಉನ್ನತ ಮಟ್ಟದಲ್ಲಿದ್ದು, ವಿದೇಶಿಯರಿಗೂ ಮಾದರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಜೀವ ಶೆಟ್ಟಿ, ನಾಗಾಭರಣ ಅಡಿಗ, ಶ್ರೀನಿವಾಸ ಬಾಯಿರಿ, ಶಿಲ್ಪಿ ಗಣೇಶ್ ಕಾರ್ಕಳ ಮತ್ತು ಅವರ ಪತ್ನಿ ಚಂದ್ರಕಲಾ ಅವರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕ ಬೇಳೂರು ಭೋಜರಾಜ ಶೆಟ್ಟಿ ಅತಿಥಿಗಳನ್ನು ಬರಮಾಡಿಕೊಂಡರು. ನಿವೃತ್ತ ಶಿಕ್ಷಕ ಕಾಳಪ್ಪ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕರುಣಾಕರ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಸೀತಾರಾಮ ಶೆಟ್ಟಿ, ಜಯಕರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಕೊಣಬಗೆ ಸೀತಾರಾಮ ಶೆಟ್ಟಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com